ಸುಳ್ಯ ಪ್ರೆಸ್ ಕ್ಲಬ್ ಕಟ್ಟಡಕ್ಕೆ ಟಿ ಎಂ ಶಾಹೀದ್ ತೆಕ್ಕಿಲ್ ರವರಿಂದ 25000 ಹಸ್ತಾಂತರ

0

ಸುಳ್ಯ ಪ್ರಸ್ ಕ್ಲಬ್ ಕಟ್ಟಡ ಕಾಮಗಾರಿಗೆ ತೆಕ್ಕಿಲ್ ಪ್ರತಿಷ್ಟಾನದ ಅಧ್ಯಕ್ಷರೂ, ಸಾಮಾಜಿಕ ರಾಜಕೀಯ ಧುರೀಣರೂ ಗೂನಡ್ಕ ಸಂಪಾಜೆಯ ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆ ಇದರ ಸ್ಥಾಪಕ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಇಂದು ಮೊದಲ ಕಂತಾಗಿ ರೂ 25000ದ ಚೆಕ್ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಹರೀಶ್ ಬಂಟ್ವಾಳ್ ರವರೀಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ತೆಕ್ಕಿಲ್ ಪ್ರತಿಷ್ಟಾನದ ಕಾರ್ಯದರ್ಶಿ ಹಾಜಿ ಅಶ್ರಫ್ ಗುಂಡಿ, ಖಜಾಂಜಿ ಟಿ ಎಂ ಜಾವೇದ್ ತೆಕ್ಕಿಲ್, ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಮಶೂದ್ ಆಶ್ರಯ ಫೌಂಡೇಷನ್,ಪ್ರೆಸ್ ಕ್ಲಬ್ ನಿರ್ದೇಶಕರಾದ ಶರೀಫ್ ಜಟ್ಟಿಪ್ಪಲ್ಲ ಉಪಸ್ಥಿತರಿದ್ದರು.