ಕಲ್ಲುಗುಂಡಿ ಬಳಿ ಅಪಘಾತ, ಸೀಟಿನೆಡೆಗೆ ಸಿಲುಕಿದ್ದ ಲಾರಿ ಚಾಲಕನನ್ನು ರಾಡ್ ಕಟ್ ಮಾಡಿ ಆಸ್ಪತ್ರೆಗೆ ಕಳುಹಿಸಿದ ಸ್ಥಳೀಯರು

0


ಕಲ್ಲುಗುಂಡಿ ಬಳಿಯ ಕಡಪಾಲದಲ್ಲಿ ಕೆಲ ಹೊತತಿನ ಮೊದಲು ನಡೆದ ಲಾರಿ ಬಸ್ ಅಪಘಾತದಲ್ಲಿ ಮೂವರು ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ತಂದು ದಾಖಲಿಸಲಾಗಿತ್ತು. ಇನ್ನು ಮೂವರು ಗಾಯಾಳುಗಳನ್ನು ಕೊಡಗು ಸಂಪಾಜೆ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.

ಲಾರಿಯ ಚಾಲಕ ಸೀಟುಗಳ ಎಡೆಯಲ್ಲಿ ಸಿಲುಕಿದ್ದು, ಅವರನ್ನು ಹೊರತೆಗೆಯಲು ಊರವರು ಸಾಕಷ್ಟು ಕಷ್ಟಪಡಲಾಯಿತು. ಗ್ಯಾಸ್ ಕಟ್ಟರ್ ತರಿಸಿ, ರಾಡನ್ನು ತುಂಡರಿಸಿ ಆತನನ್ನು ಹೊರತೆಗೆಯಲಾಯಿತೆಂದು ತಿಳಿದುಬಂದಿದೆ. ಸರಕಾರಿ ಆಸ್ಪತ್ರೆಯ ಅಂಬ್ಯುಲೆನ್ಸ್‌ನಲ್ಲಿ ಅವರನ್ನು ಸುಳ್ಯ ಕಡೆಗೆ ತರಲಾಯಿತು. ಅವರ ಎರಡೂ ಕಾಲುಗಳು ತೀವ್ರ ಜಖಂಗೊಂಡಿರುವುದಾಗಿ ಹೇಳಲಾಗಿದೆ.