ಕೊಡಿಯಾಲ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ಸಬಲೀಕರಣ ಅಭಿಯಾನ, ಮಹಿಳಾ ಮತ್ತು ಮಕ್ಕಳ ವಿಶೇಷ ಗ್ರಾಮ ಸಭೆ

0

ಕೊಡಿಯಾಲ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ಸಬಲೀಕರಣ ಅಭಿಯಾನ, ಮಹಿಳಾ ಮತ್ತು ಮಕ್ಕಳ ವಿಶೇಷ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ್ ರೈ ಅಜ್ರಂಗಳವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅರೋಗ್ಯ ಅಮೃತ ಅಭಿಯಾನದ ಬಗ್ಗೆ ತಾಲೂಕು ಸಂಯೋಜಕಿ, ಗೀತಾ, ಮನರೇಗ ಯೋಜನೆಯ ತಾಂತ್ರಿಕ ಸಹಾಯಕಿ ನಿಶಾ ಮಕ್ಕಳ ಹಕ್ಕುಗಳ ಬಗ್ಗೆ ಸಿ ಆರ್ ಟಿ ಕ್ಷೇತ್ರ ಅನುವುಗಾರರು ದಿವ್ಯ ಮಹಿಳೆಯರ ಶಿಕ್ಷಣದ ಮಹತ್ವದ ಬಗ್ಗೆ ಕೊಡಿಯಾಲ ಹಿ ಪ್ರಾಥಮಿಕ ಶಾಲಾ ಮುಖ್ಯಸ್ಥ ಸಿದ್ಧರಾಜು, ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣದ ಬಗ್ಗೆ ಎಂ ಬಿ ಕೆ ಯಶೋದಾ ಮಹಿಳೆ ಮತ್ತು ಮಕ್ಕಳ ಆರೋಗ್ಯ, ಸ್ತ್ರೀ ಸಬಲೀಕರಣದ ಬಗ್ಗೆ ಗ್ರಾಮ ಸಭೆಯ ನೋಡಲ್ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ, ಪ್ರಮೀಳಾ ಮಾಹಿತಿ ನೀಡಿದರು.

ಗ್ರಾಮ ಸಭೆಯ ಅವರಣದಲ್ಲಿ ಗ್ರಾಮ ಬನ್ ಕೇಂದ್ರ ನಿರ್ವಾಹಕ ಗಿರೀಶ್ ಕಲಪಣೆಯವರು ಅಯುಷ್ಮಾನ್ ಭಾರತ್ ಪಿ.ಎಂ.ಜಿ ಪೈ (ಆರೋಗ್ಯ ಕಾರ್ಡ್), ನೋಂದಣಿ ನಿರ್ವಹಿಸಿದವರು, ಸಾಮಾನ್ಯ ಆರೋಗ್ಯ ತಪಾಸಣೆ’ (NCD .) ಗೆ ಸಮುದಾಯ ಆರೋಗ್ಯಧಿಕಾರಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಆಶಾ ಕಾರ್ಯಕರ್ತಯರು ಸಹಕರಿಸಿದರು. ಮಕ್ಕಳ ಮತ್ತು ಮಹಿಳೆಯರ ಗ್ರಂಥಾಲಯ ಸದಸ್ಯತ್ವಕ್ಕೆ ನೋಂದಣಿ ನಡೆಯಿತು. ಶ್ರೀ ಗೌರಿ ಸಂಜೀವಿನಿ ಸಂಘದ ಸದಸ್ಯರಿಂದ ತಯಾರಿಸಲ್ಪಟ್ಟ ಉತ್ಪನ್ನಗಳ ಮಾರಾಟ ವ್ಯವಸ್ಥೆ ಮಾಡಲಾಗಿತ್ತು.

ಗ್ರಾಮ ಪಂಚಾಯತ್ ಸದಸ್ಯ ವಿಜಯಕುಮಾರಿ, ಕಲ್ಪತ್ತಬೈಲು ಶಾಲೆಯ ಮುಖ್ಯಸ್ಥ ಗಂಗಾಧರ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು. ಪಂ.ಅ.ಅಧಿಕಾರಿ ಚಂದ್ರಾವತಿ ಸಭೆಯ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಬಾಚೋಡಿ ಅಂಗನವಾಡಿ ಶಿಕ್ಷಕಿ ಸುಂದರಿ, ಧನ್ಯವಾದಗೈದರು.