ಅಮೈ ಮಡಿಯಾರು ಅಂಗನವಾಡಿ ಕೇಂದ್ರಲ್ಲಿ ಮಕ್ಕಳ ದಿನಾಚರಣೆ

0

ಉಬರಡ್ಕ ಮಿತ್ತ್ತೂರು ಅಮೈ ಮಡಿಯರು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಬಾಲ ವಿಕಾಸ ಸಮಿತಿ ಮತ್ತು ಸ್ತ್ರೀ ಶಕ್ತಿ ಸಂಘಗಳ ಸಹಯೋಗದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪುಟಾಣಿ ಸಾನ್ವಿ ಆರ್ ಯಸ್ ದೀಪ ಬೆಳಗಿಸಿ ಉದ್ಘಾಟಿಸಿದರು. ಪುಟಾಣಿ ದೃತಿಕ್ ಎಸ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪುಟಾಣಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆ, ಛದ್ಮ ವೇಷ ಸ್ಪರ್ಧೆ, ಪೋಷಕರಿಗೆ ಅಡುಗೆ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಬಾಲ ವಿಕಾಸ ಸಮಿತಿ ಅಧ್ಯಕ್ಷ ಶ್ರೀಮತಿ ಬಾಗೀರಥಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಚಿತ್ರಕುಮಾರಿ ಪಾಲಡ್ಕ, ಗ್ರಾಮ ಪಂಚಾಯತ್ ಸದಸ್ಯರಾದ ಅನಿಲ್ ಬಳ್ಳಡ್ಕ, ಶ್ರೀಮತಿ ಪೂರ್ಣಿಮಾ ಸೂoತೋಡು, ವಿನಾಯಕ ಮಿತ್ರ ಬಳಗದ ಅಧ್ಯಕ್ಷ ವಿದ್ಯಾಧರ ಹರ್ಲಡ್ಕ, ಅಮೈ ಮಡಿಯಾರು ಶಾಲಾ ಶಿಕ್ಷಕಿ ಶ್ರೀಮತಿ ರಾಮಕ್ಕ, ಅಪ್ಪಯ್ಯ ಸೂoತೋಡು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಂಗನವಾಡಿ ಹಳೆ ವಿದ್ಯಾರ್ಥಿನಿ ಬೇಬಿ. ಜಾನ್ವಿ. ವಿ. ಹರ್ಲಡ್ಕ ರವರ ಪರವಾಗಿ ಅಂಗನವಾಡಿಗೆ ಚಯರ್ ಗಳನ್ನು ಕೊಡುಗೆಯಾಗಿ ನೀಡಲಾಯಿತು.ಪೋಷಕರಾದ ಶ್ರೀಮತಿ ಚಂದ್ರವತಿ ಗಿರೀಶ್ ಪಾಲಡ್ಕ ವಂದಿಸಿದರು.ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶೋಭಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸ್ತ್ರೀ ಶಕ್ತಿ ಸಂಘದ ಸದಸ್ಯರು ಪೋಷಕರು ಸಹಕರಿಸಿದರು