ತಾಲೂಕು ಮಟ್ಟದ ಪ್ರತಿಭಾ ಕಾರಂಜಿ : ರೋಟರಿ ವಿದ್ಯಾಸಂಸ್ಥೆಯ ಕಿರಿಯರ ವಿಭಾಗ ದ್ವಿತೀಯ ಸಮಗ್ರ, ಹಿರಿಯ ಹಾಗೂ ಪ್ರೌಢ ಸಮಗ್ರ ತೃತೀಯ

0

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ ಮತ್ತು ವಿದ್ಯಾ ಬೋಧಿನಿ ವಿದ್ಯಾಸಂಸ್ಥೆಗಳು ಬಾಳಿಲ ಇವುಗಳ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಿರಿಯರ ವಿಭಾಗದಲ್ಲಿ ಸ್ವಸ್ತಿ. ಪಿ.
ಲಘು ಸಂಗೀತ ಹಾಗೂ ಸಂಸ್ಕೃತ ಧಾರ್ಮಿಕ ಪಠಣ ( ಪ್ರಥಮ) , ಆತ್ಮಿಕ್ ಪೂಜಾರಿ ಕ್ಲೇ ಮಾಡಲಿಂಗ್ ನಲ್ಲಿ ಪ್ರಥಮ ಸ್ಥಾನ, ಪಡೆದು ದ್ವಿತೀಯ ಸಮಗ್ರ ಪ್ರಶಸ್ತಿ ಗಳಿಸಿರುತ್ತಾರೆ.


ಹಿರಿಯರ ವಿಭಾಗದಲ್ಲಿ ವಂದಿತಾ V. S ಸಂಸ್ಕೃತ ಧಾರ್ಮಿಕ ಪಠಣ ( ಪ್ರಥಮ) , ಪೂರ್ವಿಕಾ, ಛದ್ಮವೇಷ ( ದ್ವಿತೀಯ) , ಮನುಜ್ಞಾ. U. B ಚಿತ್ರಕಲೆ, ದ್ವಿತೀಯ ಸ್ಥಾನ ಗಳಿಸಿ ಸಮಗ್ರ ತೃತೀಯ ಪ್ರಶಸ್ತಿ ಗಳಿಸಿರುತ್ತಾರೆ.
ಪ್ರೌಢ ವಿಭಾಗದಲ್ಲಿ ಸನಿಹ ಶೆಟ್ಟಿ , ಭರತನಾಟ್ಯ (ಪ್ರಥಮ) , ಅನುಜ್ಞಾ ಎನ್ ಹೆಚ್, ಕನ್ನಡ ಭಾಷಣ ( ದ್ವಿತೀಯ ) , ರಸಪ್ರಶ್ನೆ ಪ್ರಣಮ್ಯ ಎನ್ ಆಳ್ವ ಹಾಗೂ ಅವನಿ ಎನ್ ( ದ್ವಿತೀಯ) , ಮನಸ್ವಿ. ಯು.ಬಿ. , ಚಿತ್ರಕಲೆ ( ದ್ವಿತೀಯ) , ಶರಧಿ ಆರ್ ಶೇಟ್ ರಂಗೋಲಿಯಲ್ಲಿ ದ್ವಿತೀಯ ಸ್ಥಾನ ಗಳಿಸಿ ಸಮಗ್ರ ತೃತೀಯ ಪ್ರಶಸ್ತಿ ಗಳಿಸಿರುತ್ತಾರೆ.