ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಕಲಾಚೇತನ ಪ್ರಶಸ್ತಿ

0

ಪ್ರಗತಿಪರ ಸೇವಾ ಸಂಸ್ಥೆ ಹೊಸಹಳ್ಳಿ ಬಡಾವಣೆ, ಮಂಡ್ಯ ಇವರು ಅಯೋಜಿಸಿದ್ದ ೧೮ನೇ ರಾಜ್ಯ ಮಟ್ಟದ ಚಿತ್ರಕ್ಕೆ ಬಣ್ಣ ತುಂಬುವ ಸ್ಪರ್ಧೆಯಲ್ಲಿ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ರ್‍ಯಾಂಕ್ ಬಂದಿರುತ್ತದೆ. ಕುಮಾರಿ ಹಂಶಿಕಾ.ಬಿ ರಾಜ್ಯ ಮಟ್ಟದಲ್ಲಿ “ಕಲಾಚೇತ” ಪ್ರಶಸ್ತಿ ಹಾಗೂ ಸ್ಕಾಲರ್ ಶಿಫ್ ಪಡೆದುಕೊಂಡಿರುತ್ತಾಳೆ. ಈಕೆ ನಿತ್ಯಾನಂದ ಬಾಲಾಡಿ ಹಾಗೂ ಶ್ರೀಮತಿ ರತ್ನಾವತಿ ಪಿ ದಂಪತಿಗಳ ಪುತ್ರಿ.

ಹಾಗೂ ಕುಮಾರಿ ದುರ್ಗಾಶ್ರೀ ಇವಳು ಜಿಲ್ಲಾ ಮಟ್ಟದಲ್ಲಿ ಕಲಾಚೇತನ ಪ್ರಶಸ್ತಿ ಪಡೆದುಕೊಂಡಿರುತ್ತಾಳೆ. ಈಕೆ ಗೋಪಾಲಕೃಷ್ಣ ಪರಿವಾರಕಾನ ಹಾಗೂ ಶ್ರೀಮತಿ ಚಂದ್ರಾವತಿ ದಂಪತಿಗಳ ಪುತ್ರಿ. ಅದೇ ರೀತಿ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಭಾರತಿ.ಪಿ, ಸಂಘಟಕಾ ಶಿಕ್ಷಕರಾದ ಶ್ರೀಮತಿ ಮೈತ್ರಿ.ಎಂ.ಬಿ ಇವರಿಗೆ “ಕಲಾ ಪೋಷಕ ಪ್ರಶಸ್ತಿ” ಹಾಗೂ ರಾಜ್ಯ ಮಟ್ಟದಲ್ಲಿ “ಉತ್ತಮ ಕಲಾ ಶಾಲೆ” ಎಂಬ ಪ್ರಶಸ್ತಿ ಪಡೆದುಕೊಂಡಿರುತ್ತದೆ.