ಅರಂತೋಡಿನಲ್ಲಿ ಸುಳ್ಯ ತಾಲೂಕು ಸಹಕಾರಿ ಸಪ್ತಾಹ, ಸಹಕಾರಿ‌ ಮೆರವಣಿಗೆಯೊಂದಿಗೆ ಸಪ್ತಾಹಕ್ಕೆ ಚಾಲನೆ

0

ಸುಳ್ಯ ತಾಲೂಕು ಮಟ್ಟದ ಸಹಕಾರಿ ಸಪ್ತಾಹ ಇಂದು ಅರಂತೋಡಿನಲ್ಲಿ ನಡೆಯುತ್ತಿದ್ದು, ಸಹಕಾರಿ ಮೆರಣಿಗೆಯೊಂದಿಗೆ ಸಪ್ತಾಹಕ್ಕೆ ಚಾಲನೆ ದೊರೆತಿದೆ.

ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ ಸಪ್ತಾಹ ಮೆರವಣಿಗೆಗೆ ಚಾಲನೆ ನೀಡಿದರು.

ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಯವರ ಅಧ್ಯಕ್ಷತೆಯಲ್ಲಿ ಸಹಕಾರಿ ಸಪ್ತಾಹ ನಡೆಯುತ್ತಿದ್ದು,

ಡಾ.ಕಲ್ಲಡ್ಕ ಪ್ರಭಾಕರ ಭಟ್, ಡಾ. ರೇಣುಕಾಪ್ರಸಾದ್ ಕೆ.ವಿ. ಸಹಿತ ತಾಲೂಕಿನ ನೂರಾರು ಸಹಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದರು.