ನ.18-19 : ಪಂಜದಲ್ಲಿ ಮೈಸೂರು ವಿಭಾಗ ಮಟ್ಟದ ಕಬಡ್ಡಿ ಪಂದ್ಯಾಟ, ಅಂತಿಮ ಸಿದ್ಧತೆ ನಡೆಯುತ್ತಿದೆ, ಒಟ್ಟು 32 ತಂಡಗಳು ಪಾಲ್ಗೊಳ್ಳಲಿವೆ

0

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸುಳ್ಯ ತಾಲೂಕು ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಪಂಜ ಇವರ ಸಹಯೋಗದಲ್ಲಿ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ-2022 ನ.18 ಮತ್ತು ನ.19 ರಂದು ಪಂಜ ಸರಕಾರಿ ಪದವಿ ಪೂರ್ವ ಕಾಲೇಜ್ ನ ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯಾಟದಲ್ಲಿ ಒಟ್ಟು 32 ತಂಡಗಳು ಪಾಲ್ಗೊಳ್ಳಲಿವೆ.14 ರ ವಯೋಮಿತಿಯ ಬಾಲಕರ 8 ತಂಡ ಮತ್ತು 17 ವಯೋಮಿತಿಯ ಬಾಲಕರ 8 ತಂಡ , 14 ರ ವಯೋಮಿತಿಯ ಬಾಲಕಿಯರ 8 ತಂಡ 17ರ ವಯೋಮಿತಿಯ ಬಾಲಕಿಯರ 8 ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಳ್ಳಲಿದೆ.
ಪಂದ್ಯಾಟಕ್ಕಾಗಿ ಅನೇಕ ದಿನಗಳಿಂದ ಸಿದ್ಧತೆಗಳು ನಡೆಯುತ್ತಿದೆ.
ಪಂದ್ಯಾಟಕ್ಕಾಗಿ ಎರಡು ಅಂಕಣ ನಿರ್ಮಿಸಿದ್ದು,ಅಂತಿಮವಾಗಿ ಮ್ಯಾಟ್ ಅಳವಡಿಕೆ , ಮೊದಲಾದ ಸಿದ್ಧತೆಗಳು ಭರದಿಂದ ನಡೆಯುತ್ತಿದೆ.
.ನ.18 ರಂದು ಮುಂಜಾನೆ ಉದ್ಘಾಟನೆ ಕಾರ್ಯಕ್ರಮ ಜರುಗಲಿದೆ.ಸಂಜೆ ಹೊನಲು ಬೆಳಕಿನ ಪಂದ್ಯಾಟ ಉದ್ಘಾಟನೆ ಗೊಳ್ಳಲಿದೆ.ನ.19 ರಂದು ಸಂಜೆ ಸಮಾರೋಪ ಸಮಾರಂಭ ಜರುಗಲಿದೆ.