ಅರಂತೋಡಿನಲ್ಲಿ ತಾಲೂಕು ಮಟ್ಟದ ಸಹಕಾರಿ ಸಪ್ತಾಹ, ಹಿರಿಯ ಸಹಕಾರಿ ಪಿ.ಬಿ.ದಿವಾಕರ ರೈಯವರಿಗೆ ಸಹಕಾರಿ ಸನ್ಮಾನ, ಅರಂತೋಡು ಸಹಕಾರಿ ಸಂಘದಲ್ಲಿ ದಿ.ವಸಂತ್ ಭಟ್ ಸ್ಮರಣಾರ್ಥ ಸಹಕಾರ ಸಾಂತ್ವನ ನಿಧಿ ಲೋಕಾರ್ಪಣೆ

0

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿಯಮಿತ ಬೆಂಗಳೂರು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು, ಸಹಕಾರಿ ಯೂನಿಯನ್ ಸುಳ್ಯ ತಾಲೂಕು ಮತ್ತು ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಎಲ್ಲಾ ಇತರ ಸಹಕಾರ ಸಂಘಗಳ ಸಹಕಾರದೊಂದಿಗೆ ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ 69 ನೇ ಅಖಿಲ ಭಾರತ ಸಹಕಾರ ಸಪ್ತಾಹ ಅರಂತೋಡು ಸಿರಿ ಸೌಧ ಸಭಾಭವನದಲ್ಲಿ ನಡೆಯಿತು.

ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಸಹಕಾರಿ ಸಪ್ತಾಹವನ್ನು ಉದ್ಘಾಟಿಸಿದರು.

ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು.

ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಸಹಕಾರಿ ಧ್ವಜಾರೋಹಣಗೈದರು.

ಸುಳ್ಯ ಎ.ಒ.ಎಲ್.ಇ. ಪ್ರಧಾನ ಕಾರ್ಯದರ್ಶಿ ಡಾ.ರೇಣುಕಾಪ್ರಸಾದ್ ಕೆ.ವಿ. ಅರಂತೋಡು ಸಹಕಾರಿ ಸಂಘದಲ್ಲಿ ಆರಂಭಿಸಲಾದ ಇ- ಸ್ಟ್ಯಾಂಪಿಂಗ್ ಸೌಲಭ್ಯ ಲೋಕಾರ್ಪಣೆ ಮಾಡಿದರು.
ಭೂ ಅಭಿವೃದ್ಧಿ ಬ್ಯಾಂಕ್ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಕೃಷಿ ಕಾರ್ಮಿಕರಿಗೆ ವಿಮೆ ಸೌಲಭ್ಯ ವಿತರಿಸಿದರು.
ಭಾರತೀಯ ರಬ್ಬರ್ ಮಂಡಳಿ ನಿರ್ದೇಶಕ 2023 ಕ್ಯಾಲೆಂಡರ್ ನ್ನು ಮುಳಿಯ ಕೇಶವ ಭಟ್ ಬಿಡುಗಡೆ ಮಾಡಿದರು.
ಸಹಕಾರಿ ಯೂನಿಯನ್ ತಾಲೂಕು ಅಧ್ಯಕ್ಷ ರಮೇಶ್ ದೇಲಂಪಾಡಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀವೇಣಿ ರಾವ್ ಕೆ, ಅರಂತೋಡು ಗ್ರಾ.ಪಂ. ಅಧ್ಯಕ್ಷೆ ಹರಿಣಿ ದೇರಾಜೆ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕಿ ಶ್ರೀಮತಿ ಸಾವಿತ್ರಿ ರೈ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ನಿರ್ದೇಶಕಿ ಶ್ರೀಮತಿ ಪ್ರೇಮಾ ವಸಂತ್ ರಾವ್ ತೊಡಿಕಾನ, ತಾ.ಪಂ. ಮಾಜಿ ಉಪಾಧ್ಯಕ್ಷೆ ಶ್ರೀಮತಿ ಪುಷ್ಪ ಮೇದಪ್ಪ, ಅರಂತೋಡು – ತೊಡಿಕಾನ ಸಹಕಾರ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ, ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ, ಹಿರಿಯ ಸಹಕಾರಿ ನಿತ್ಯಾನಂದ ಮುಂಡೋಡಿ ವೇದಿಕೆಯಲ್ಲಿ ಇದ್ದರು.

ಹಿರಿಯ ಸಹಕಾರಿ ಪಿ.ಬಿ. ರೈಯವರಿಗೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಾ.ರೇಣುಕಾಪ್ರಸಾದ್ ಕೆ.ವಿ., ಭಾರತೀಯ ರಬ್ಬರ್ ಮಂಡಳಿ ನಿರ್ದೇಶಕರಾಗಿ ಆಯ್ಕೆಯಾದ ಮುಳಿಯ ಕೇಶವ ಭಟ್, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ನಿತ್ಯಾನಂದ ಮುಂಡೋಡಿ, ಶ್ರೀಮತಿ ಪ್ರೇಮಾ ವಸಂತ ಭಟ್ ರನ್ನು ಅರಂತೋಡು ಸಹಕಾರಿ ಸಂಘದ ವತಿಯಿಂದ ಗೌರವಿಸಲಾಯಿತು.

ತಾಲೂಕಿನ ವಿವಿಧ ಸಹಕಾರ ಸಂಘದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಸಿಬ್ಬಂದಿಗಳಿಗೆ ಸನ್ಮಾನ ನಡೆಯಿತು.

ಪುತ್ತೂರು ವಿ.ಸಿ. ಇ.ಟಿ. ಯ ಡಿಪಾರ್ಟ್ಮೆಂಟ್ ಆಫ್ ಮೆಕ್ಯಾನಿಕಲ್ ನ ಡಾ. ಮನುಜೇಶ್ ಆವಿಷ್ಕಾರ ಪೋಷಣೆ, ಸ್ಟಾರ್ಟ್ ಅಪ್ ಗಳಿಗೆ ಉತ್ತೇಜನ ಮತ್ತು ತಂತ್ರಜ್ಞಾನ ಉನ್ನತೀಕರಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.

ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಅರಂತೋಡು ಸಹಕಾರಿ ಸಂಘದ ಸಿಇಒ ವಾಸುದೇವ ನಾಯಕ್ ಹಾಗೂ ಸಿಬ್ಬಂದಿಗಳು, ನಿರ್ದೇಶಕರು ಸಹಕಾರದಲ್ಲಿ ಕಾರ್ಯಕ್ರಮ ನಡೆಯಿತು.