ಗುತ್ತಿಗಾರು: ಅಯ್ಯಪ್ಪ ಸೇವಾ ಸಮಿತಿಯ ಪೂರ್ವಭಾವಿ ಸಭೆ

0

ಅಯ್ಯಪ್ಪ ಸೇವಾ ಸಮಿತಿ ಗುತ್ತಿಗಾರು ವತಿಯಿಂದ ಶನಿಪೂಜೆ ಮತ್ತು “ಮಣಿಕಂಠನ ಮಹಿಮೆ” ಎಂಬ ನಾಟಕ ಪ್ರದರ್ಶನ ಜ.14 ರಂದು ನಡೆಯಲಿದ್ದು ಅದರ ಪೂರ್ವಭಾವಿ ಸಭೆಯು ನ.13 ರಂದು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು. ಸಭೆಯಲ್ಲಿ ಅಯ್ಯಪ್ಪ ಸೇವಾ ಸಮಿತಿಯ ಗೌರವಾಧ್ಯಕ್ಷ ಬಿ.ಕೆ ಬೆಳ್ಯಪ್ಪಗೌಡ, ಹಿರಿಯ ಭಜಕ ಪರಮೇಶ್ವರ ಗೌಡ ಪೈಕ, ಭಜನಾ ಮಂದಿರದ ಗೌರವಾಧ್ಯಕ್ಷ ಕಿಶೋರ್ ಕುಮಾರ್ ಪೈಕ ಬೊಮ್ಮದೇರೆ, ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಕಂದ್ರಪ್ಪಾಡಿ, ಪ್ರಧಾನ ಕಾರ್ಯದರ್ಶಿ ಮೋಹನ್ ಕಡ್ತಲ್ ಕಜೆ, ಕಾರ್ಯದರ್ಶಿ ದಯಾನಂದ ಕನ್ನಡ್ಕ ವೇದಿಕೆಯಲ್ಲಿದ್ದರು. ಸಭೆಯಲ್ಲಿ ಸೇವಾ ಸಮಿತಿಯ ಸದಸ್ಯರು, ಸ್ಥಳೀಯರು ಪಾಲ್ಗೊಂಡಿದ್ದರು.