ಅರಂತೋಡು ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ ಆವರ್ತನ 2022 ಕಾರ್ಯಕ್ರಮ

0

ಅರಂತೋಡು ಕಾಲೇಜಿನ 2014-15 ಸಾಲಿನ ಹತ್ತನೇ ತರಗತಿಯ ಹಳೆ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ ಕಾರ್ಯಕ್ರಮವು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ನಲ್ಲಿ ನ 13 ರಂದು ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಪದವಿ ಪೂರ್ವ ಕಾಲೇಜಿನ ಸಂಚಾಲಕರಾದ ಕೆ ಆರ್ ಗಂಗಾಧರ ರವರು ನೆರವೇರಿಸಿದರು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜು ಪ್ರಾಂಶುಪಾಲರಾದ ರಮೇಶ್,ಶಾಲೆ ಮುಖ್ಯ ಶಿಕ್ಷಕರಾದ ಸೀತಾರಾಮ, ಸಹಶಿಕ್ಷಕರಾದ ಕಿಶೋರ್, ಮಮತ,ನಿವೃತ್ತ ಶಿಕ್ಷಕರಾದ ದೇವಕಿ ಹಾಗೂ ವಸಂತ ,ಉಪನ್ಯಾಸಕಿ ಕುಸುಮ ವೇದಿಕೆ ಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ನಿವೃತ್ತ ಮುಖ್ಯೋಪಾಧ್ಯಾಯರಾದ ಆನಂದರವರು ವಹಿಸಿದ್ದರು.ವಿದ್ಯಾರ್ಥಿಗಳು ಯಾವುದೇ ಉನ್ನತ ಸ್ಥಾನಕ್ಕೆ ತಲುಪಿದರು ಅದರಲ್ಲಿ ಶಿಕ್ಷಕರ ಪಾತ್ರ ಬೆಲೆಕಟ್ಟಲಾಗದ ಕೊಡುಗೆ ,ಅಂತಹ ಶಿಕ್ಷಕರಿಗೆ ವಂದನೆ ಸಮರ್ಪಿಸುವುದು ವಿದ್ಯಾರ್ಥಿಗಳ ಕರ್ತವ್ಯ ಎನ್ನುವ ಉದ್ದೇಶದಲ್ಲಿ ಜರುಗಿದ ಸಮ್ಮಿಲನದಲ್ಲಿ ಶಿಕ್ಷಕರು ಹಾಗೂ ಹಳೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಡಿಸಿದರು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿ ಜಯಸೂರ್ಯ ಸ್ವಾಗತಿಸಿ, ಸುನೇಶ್ಚಂದ್ರ ಪ್ರಸ್ತಾವನೆ ಗೈದು, ಶಕುಂತಲ ನಿರೂಪಿಸಿ, ಹರ್ಷಿತ್ ಅರ್ಭಡ್ಕ ಧನ್ಯವಾದ ಸಮರ್ಪಿಸಿದರು.