ನ.25: ನಿಂತಿ ಕಲ್ಲಿನಲ್ಲಿ ಹರ್ಷ ಕಾಂಪ್ಲೆಕ್ಸ್ ಮತ್ತು ಶ್ರೀ ಲಕ್ಷ್ಮಿನರಸಿಂಹ ಎಂಟರ್ಪ್ರೈಸಸ್ ಶುಭಾರಂಭ

0

ನಿಂತಿ ಕಲ್ಲಿನ ಹೃದಯ ಭಾಗದಲ್ಲಿರುವ ಅಲೆಕ್ಕಾಡಿ ಜನಾರ್ಧನ ಪೂಜಾರಿ ಮತ್ತು ಮಕ್ಕಳ ಮಾಲಕತ್ವದ ಹರ್ಷ ಕಾಂಪ್ಲೆಕ್ಸ್ ಮತ್ತು ಶ್ರೀ ಲಕ್ಷ್ಮಿ ನರಸಿಂಹ ಎಂಟರ್ಪ್ರೈಸಸ್ ಇದರ ಉದ್ಘಾಟನಾ ಸಮಾರಂಭ ನ.೨೫ ರಂದು ನಡೆಯಲಿದೆ ಸವಣೂರು ಶ್ರೀ ವಿದ್ಯಾ ರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಅವರು ಉದ್ಘಾಟಿಸಲಿರುವರು. ಮುರುಳ್ಯ ದೇವರ ಕಾನ ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಪಿ.ರಾಮಚಂದ್ರ ಭಟ್ ದೇವಸ್ಯ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಬಾಳಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸವಿತಾ ಗುರುರಾಜ್ ಚಾಕೋಟೆಡ್ಕ ಸಭಾಧ್ಯಕ್ಷತೆ ವಹಿಸಲಿರುವರು. ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ, ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಾನಕಿ ಮುರುಳ್ಯ, ಕಲ್ಮಡ್ಕ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಮುರುಳ್ಯ ಎಣ್ಮೂರು ಸೊಸೈಟಿಯ ಅಧ್ಯಕ್ಷ ವಸಂತ ಹುದೇರಿ ಮುಖ್ಯ ಅತಿಥಿಗಳಾಗಿರುವರು.
ಸಿಮೆಂಟ್, ಕಬ್ಬಿಣದ ಕಂಬಿ, ಪಿ ಎ ಸಿ ಪೈಪ್, ಸಿಪಿವಿಸಿ ಪೈಪ್, ಪೈಪ್ ಫಿಟ್ಟಿಂಗ್ಸ್, ವಾಟರ್ ಟ್ಯಾಂಕ್, ಬ್ಯಾರಲ್, ಸ್ಯಾನಿಟರಿ ಐಟಂಗಳು, ಪ್ಲಾಸ್ಟಿಕ್ ಐಟಂಗಳು, ಟರ್ಪಲ್, ಶೇಡ್ ನೆಟ್, ವೀಡ್ ಮ್ಯಾಟ್, ಕಿಟಕಿ, ದಾರಂದ, ಲಿಂಟಲ್, ಬೇಲಿಕಂಬ, ರಿಂಗ್ ಹಾರ್ಡ್ ವೇರ್ ಐಟಂಗಳು ಇಲ್ಲಿ ದೊರೆ ಯುತ್ತದೇ ಎಂದು ಮಾಲಕರು ತಿಳಿಸಿದ್ದಾರೆ.