ಸುಳ್ಯ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಲ್ಲಿ ಧನಲಕ್ಷ್ಮೀ ಪೂಜೆ

0

ಸುಳ್ಯ ರಥಬೀದಿಯ ದುರ್ಗಾ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ವರ್ಷಚಾರಣೆಯ ಪ್ರಯುಕ್ತ ಬೆಳಗ್ಗೆ ಗಣಪತಿ ಹವನ ಹಾಗೂ ಧನಲಕ್ಷ್ಮೀ ಪೂಜೆಯು ನ.18 ರಂದು ಪುರೋಹಿತ್ ಪುರುಷೋತ್ತಮ ಭಟ್ ದೇರ್ಕಜೆ ಯವರ ನೇತೃತ್ವದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಉಮೇಶ್ ಪ್ರಭು, ನಿರ್ದೇಶಕರಾದ ಹೇಮಂತ್ ಕುಮಾರ್ ಕಂದಡ್ಕ, ಪ್ರಕಾಶ್ಚಂದ್ರ ಪಿ, ಶಾಖಾ ವ್ಯವಸ್ಥಾಪಕ ರಾಜೇಶ್ ಬಿ.ಎಸ್ ಹಾಗೂ ಸಿಬ್ಬಂದಿ ವರ್ಗದವರು, ಗ್ರಾಹಕರಾದ ಸತ್ಯಪ್ರಸಾದ್, ವೈಕುಂಠ ಪ್ರಭು ಮತ್ತಿತರರು ಉಪಸ್ಥಿತರಿದ್ದರು.