ಪಂಜ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

0


ನವೆಂಬರ್ 14 ರಂದು ಮಕ್ಕಳ ದಿನಾಚರಣೆ ಕಾರ್ಯಕ್ರಮ ಪಂಜ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಅನುಶ್ರೀ ಅಂಗನವಾಡಿ ಪುಟಾಣಿಗಳಿಗೆ ಪುಸ್ತಕ ಮತ್ತು ಪೆನ್ಸಿಲ್, ವನಿತಾ ಸಮಾಜ ಅಧ್ಯಕ್ಷೆ ಪುಷ್ಪಾ ಡಿ. ಪ್ರಸಾದ್ ಪುಟಾಣಿಗಳಿಗೆ ಆಟಿಕೆ ವಸ್ತುಗಳನ್ನು ಕೊಡುಗೆಯಾಗಿ ವಿತರಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಸಂದರ್ಶಕಿ ರಾಹೇಲಮ್ಮ, ವನಿತಾ ಸಮಾಜದ ಪೂರ್ವಧ್ಯಾಕ್ಷರಾದ ವೇದಾವತಿ ಎಂ, ಹೇಮಲತಾ ಜನಾರ್ದನ ಮತ್ತು ಸದಸ್ಯರಾದ ಸುಶೀಲಾ, ಪುಷ್ಪಾ ಹರೀಶ್, ವಿಮಲ ಹಾಗೂ ಅಂಗನವಾಡಿ ಪುಟಾಣಿಗಳು, ಪೋಷಕರು ಉಪಸ್ಥಿತರಿದ್ದರು. ರಾಘವೇಂದ್ರ ಬೇಕರಿ ಪಂಜ ಮಾಲಕರಾದ ದಾಮೋದರ್ ಮಕ್ಕಳಿಗೆ ಸಿಹಿತಿಂಡಿ ನೀಡಿ ಸಹಕರಿಸಿದರು. ಅಂಗನವಾಡಿ ಕಾರ್ಯಕರ್ತೆ ಭಾಗೀರಥಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.