ನ.27: ದ.ಕ ಜಿಲ್ಲಾ ಯುವಜನೋತ್ಸವ 2022-23

0

ಯುವಸಬಲೀಕರಣ ಕ್ರೀಡಾ ಇಲಾಖೆಯ ವತಿಯಿಂದ ನಡೆಯುವ ದ.ಕ ಜಿಲ್ಲಾ ಯುವಜನೋತ್ಸವ 2022-23 ನ.27 ರಂದು ಪದ್ಮಾವತಿ ಕಲಾ ಮಂದಿರ ಯುವಕ ಮಂಡಲ ದೇಲಂತಬೆಟ್ಟು, ಶಿಬರೂರು ಇಲ್ಲಿ ನಡೆಯಲಿದೆ. ಜಾನಪದ ನೃತ್ಯ, ಜಾನಪದ ಗೀತೆ, ಏಕಾಂಕ ನಾಟಕ, ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ವಾದ್ಯಗಳು, ಶಾಸ್ತ್ರೀಯ ನೃತ್ಯ, ಹಾರ್ಮೋನಿಯಂ, ಗಿಟಾರ್, ಆಶುಭಾಷಣ ಸ್ಪರ್ಧೆ (ಕನ್ನಡ,ಹಿಂದಿ,ಇಂಗ್ಲೀಷ್), ಭರತನಾಟ್ಯ, ಕೂಚಿಪುಡಿ, ತಬಲಾ, ಮೃದಂಗ, ಕೊಳಲು ಸ್ಪರ್ಧೆಗಳು ನಡೆಯಲಿದೆ. ಭಾಗವಹಿಸುವವರು ಸದ್ರಿ ದಿನ ಪೂ.9.30 ರ ಒಳಗೆ ಸ್ಥಳದಲ್ಲಿ ವರದಿ ಮಾಡಿಕೊಳ್ಳತಕ್ಕದು. ಎಂದು ನೋಡೆಲ್ ಅಧಿಕಾರಿ ದೇವರಾಜ್ ಮುತ್ಲಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.