ಜಾಲ್ಸೂರು: ಸಪ್ತ ಕಿರಣ ಕಾರ್ಯಕ್ರಮ 2022, ಸಾಧನಾಶ್ರೀ ಪ್ರಶಸ್ತಿ ಮತ್ತು ಪಡುಮಲೆ ಯಶಸ್ವಿ ಪ್ರಶಸ್ತಿ ಪ್ರದಾನ

0

ದ.ಕ. ಜಿ.ಪಂ. ಮಂಗಳೂರು, ಸುಳ್ಯ ತಾ.ಪಂ., ಜಾಲ್ಸೂರು ಗ್ರಾ.ಪಂ., ಗ್ರಾಮ ಪಂಚಾಯತಿ ಗ್ರಂಥಾಲಯ, ಮಾಹಿತಿ ಕೇಂದ್ರ, ಮಂಗಳ ಕಲಾ ಸಾಹಿತ್ಯ ವೇದಿಕೆ ಪಟ್ಟೆ – ಬಡಗನ್ನೂರು ಘಟಕ, ಯಶಸ್ವಿ ನಾಗರಿಕ ಸೇವಾ ಸಂಘ ವಾಸುದೇವನಗರ, ಕಾರ್ಕಳ ಇದರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಕೇಂದ್ರ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಸಪ್ತಕಿರಣ ಕಾರ್ಯಕ್ರಮ 2022 ಗ್ರಾಮ ಪಂಚಾಯತಿ ಗ್ರಂಥಾಲಯ ಸಪ್ತಾಹ – ಸದಸ್ಯತ್ವ ಆಂದೋಲನ ಕಾರ್ಯಕ್ರಮ, ಮಕ್ಕಳ ಸ್ನೇಹಿ ಗ್ರಂಥಾಲಯ – ಅಮ್ಮನಿಗೊಂದು ಪುಸ್ತಕ ಓದುಗರ ಸಮಾವೇಶ ಸಾಧನಾಶ್ರೀ ಪ್ರಶಸ್ತಿ ಮತ್ತು ಪಡುಮಲೆ ಯಶಸ್ವಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜಾಲ್ಸೂರು ಗ್ರಾಮ ಪಂಚಾಯತಿ ಸಭಾಭವನದಲ್ಲಿ ನ.16ರಂದು ಜಾಲ್ಸೂರು ಗ್ರಾ.ಪಂ. ಸಭಾಭವನದಲ್ಲಿ ಜರುಗಿತು.

ಗ್ರಾ.ಪಂ. ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ ಅವರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮಂಡಲ ಪ್ರಧಾನರಾದ ಉಪೇಂದ್ರ ಕಾಮತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಸುಲೋಚನ ನಾಯಕ್, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ರೂಪಾ ಜೆ ರೈ, ಮಂಡೆಕೋಲು ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಸಾವಿತ್ರಿ ಕಣೆಮರಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಿಂದ ಎನ್.ಬಿ. ಪದ್ಮಯ್ಯ ಗೌಡ ನಂಗಾರು, ಹೈನುಗಾರಿಕೆ ಕ್ಷೇತ್ರದಿಂದ ಸತೀಶ್ ಕೊಮ್ಮೆಮನೆ, ಯಕ್ಷಗಾನ ಕ್ಷೇತ್ರದಿಂದ ಶೇಷಪ್ಪ ಗೌಡ ಕಾಯರಡ್ಕ, ವೈದ್ಯಕೀಯ ಕ್ಷೇತ್ರದಿಂದ ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಡಾ. ರವಿರಾಜ್ ಬೈತಡ್ಕ, ಹಿರಿಯ ನಾಗರಿಕರ ಪರವಾಗಿ ಕೃಷ್ಣಸ್ವಾಮಿ ಕುಕ್ಕಂದೂರು, ಶಿಕ್ಷಣ ಕ್ಷೇತ್ರದಿಂದ ನಾರಾಯಣ ಮಾಸ್ತರ್ ಕಾಟೂರು, ಆರೋಗ್ಯ ಇಲಾಖೆಯ ಕು. ಸುರಕ್ಷಾ ಅವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಅಡ್ಕಾರು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಪ್ರೇಮಲತಾ ಎನ್., ಆಶಾ ಕಾರ್ಯಕರ್ತೆ ಶ್ರೀಮತಿ ಸರಸ್ವತಿ ಮರಸಂಕ, ಗುತ್ತಿಗಾರು ಗ್ರಾ.ಪಂ.‌ ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಅಭಿಲಾಷ ಅವರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕೆ.ಬಿ. ಸುಬ್ಬಯ್ಯ, ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ವಿನೋಬನಗರ, ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಸುಚಿತ್ರ ಶೆಟ್ಟಿ, ಯಶಸ್ವಿ ನಾಗರಿಕ ಸೇವಾ ಸಂಘದ ಸಂಚಾಲಕ ಮುರಲೀಧರ ಸಿ.ಹೆಚ್., ಸದಸ್ಯರುಗಳಾದ
ಶ್ರೀಮತಿ ತಿರುಮಲೇಶ್ವರಿ ಮರಸಂಕ, ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ, ಶ್ರೀಮತಿ ಸಾವಿತ್ರಿ ಅಡ್ಕಾರುಬೈಲು, ವಿಜಯ ಅಡ್ಕಾರು, ಶ್ರೀಮತಿ ಗೀತಾಗೋಪಿನಾಥ್ ಬೊಳುಬೈಲು, ಶ್ರೀಮತಿ ಗೀತಾ ಚಂದ್ರಹಾಸ ಅರ್ಭಡ್ಕ, ಮುಜೀಬ್ ಪೈಚಾರು, ಈಶ್ವರ ನಾಯ್ಕ ಕುಕ್ಕಂದೂರು, ಶ್ರೀಮತಿ ಅಂಬಿಕಾ ಕುಕ್ಕಂದೂರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾ.ಪಂ. ಸಿಬ್ಬಂದಿಗಳು ಸಹಕರಿಸಿದರು.