ಕೆಂಗಣ್ಣು-ಸಾಂಕ್ರಮಿಕ ರೋಗದ ಬಗ್ಗೆ ಇರಲಿ ಎಚ್ಚರಿಕೆ

0
           
'ಮೆಡ್ರಾಸ್ ಐ' ಎಂದು ಆಡುಮಾತಿನಲ್ಲಿ ಕರೆಯಲ್ಪಡುವ ಕೆಂಗಣ್ಣು ಅಥವಾ ಕಂಜಂಕ್ಟಿವೈಟಿಸ್ ಸೋಂಕು ಕಣ್ಣಿಗೆ ಸಂಬಂಧಿಸಿದ ಒಂದು ಸಾಂಕ್ರಾಮಿಕ ರೋಗವಾಗಿದೆ.ಕಣ್ಣುಉರಿ,ಕೆಂಪಗಿಗುವುದು,ನೋವು ಇದರ ಮುಖ್ಯ ಲಕ್ಷಣ.ಈ ಸೋಂಕು ಬಹು ಬೇಗ ಒಬ್ಬರಿಂದೊಬ್ಬರಿಗೆ ಹರಡುವ ಕಾರಣ ಈ ಖಾಯಿಲೆಯನ್ನು ತಡೆಗಟ್ಟುವುದು ಒಳ್ಳೆಯದು.

ಸೋಂಕಿನ ರೋಗ-ಲಕ್ಷಣಗಳು;
ಕಣ್ಣಿನ ಬಿಳಿ ಭಾಗದ ಹೊರಗಿನ ಪದರ ಹಾಗೂ ಕಣ್ಣಿನ ರೆಪ್ಪೆಗಳ ಒಳಗಿನ ಪದರ ಉರಿಯೂತಕ್ಕೆ ಒಳಗಾಗುತ್ತದೆ.ಇದಕ್ಕೆ ಮುಖ್ಯ ಕಾರಣ, ಬ್ಯಾಕ್ಟೀರಿಯಾ, ವೈರಸ್ ಅಥವಾ ಕಸ,ಧೂಳಿನಂತಹ ಅಲರ್ಜಿಕಾರಕ ಇತ್ಯಾದಿಗಳು.ಕಣ್ಣು ಗುಲಾಬಿ ಅಥವಾ ಕೆಂಪಗಾಗುವುದು, ಉರಿಯಿಂದ ಕಣ್ಣಲ್ಲಿ ನೀರು ಬರುವುದು, ತುರಿಕೆ, ಕಣ್ಣು ಊದುವುದು, ಕಣ್ಣಿಗೆ ಕಸ ಬಿದ್ದ ಅನುಭವವಾಗುತ್ತದೆ, ಕಣ್ಣು ಬಿಳಿ ಅಥವಾ ಹಳದಿ ಬಣ್ಣದಿಂದ ಮುಚ್ಚಿರುತ್ತದೆ.ಕೆಲವೊಮ್ಮೆ ಸೂರ್ಯ ಕಿರಣವನ್ನು ನೋಡಲು ಕಷ್ಟವಾಗುವುದು ಇತ್ಯಾದಿಗಳು ಈ ರೋಗದ ಲಕ್ಷಣಗಳು.

ಕಣ್ಣಿನ ಸೋಂಕಿಗೆ ಕಾರಣಗಳು ಹಾಗೂ ಅದರ ನಿರ್ವಹಣೆ:

      ಕಂಜಂಕ್ಟಿವೈಟಿಸ್ ಗೆ ಹೆದರುವ ಅಗತ್ಯವಿಲ್ಲ.ಹಾಗಂತ ಅದನ್ನು ತೀರ ನಿರ್ಲಕ್ಷ್ಯ ಮಾಡಿದರೆ ಕಣ್ಣಿನ ದೃಷ್ಟಿಗೆ ತೊಂದರೆಯಾಗುವ ಸಾಧ್ಯತೆ ಇದೆ.ಕಂಜಂಕ್ಟಿವೈಟಿಸ್ ಗೆ ಒಳಗಾದವರನ್ನು ನೋಡುವುದರಿಂದ ಸೋಂಕು ಒಬ್ಬರಿಂದೊಬ್ಬರಿಗೆ ಹರಡುವುದಿಲ್ಲ.ಬದಲಿಗೆ ಕೈ ಕುಳುಕುವುದು, ಆಲಂಗಿಸುವುದು,ಅವರು ಮುಟ್ಟಿದ ವಸ್ತುಗಳನ್ನು ಮುಟ್ಟಿ ಕಣ್ಣಿನ್ನು ಒಜ್ಜಿ ಕೊಂಡರೆ ಹರಡುತ್ತದೆ.ಕೆಲವೊಮ್ಮೆ ಕಂಜಂಕ್ಟಿವೈಟಿಸ್ ಕಲುಷಿತ ನೀರು, ಕಲುಷಿತ ವಾತಾವರಣದಿಂದ ಹರಡುವ ಸಾಧ್ಯತೆ ಇರುತ್ತದೆ.

ತಡೆಗಟ್ಟುವಿಕೆ;

•ಕೈ-ಕಾಲುಗಳನ್ನು ಆಗಾಗ ಸೋಪ್, ಹ್ಯಾಂಡ್ ವಾಷ್ ಗಳಿಂದ ತೊಳೆಯುತ್ತಿರಬೇಕು.
•ಪ್ರತಿನಿತ್ಯ,ತೊಳೆದಿರುವ ಶುಭ್ರ ಬಟ್ಟೆ,ಟವೆಲ್, ಕರ್ಚೀಫ್ ಗಳನ್ನು ಬಳಸಬೇಕು.
•ಇನ್ನೊಬ್ಬರು ಉಪಯೋಗಿಸುವ ಕಾಡಿಗೆ, ಕಣ್ಣಿನ ಮೇಕಪ್,ಟವೆಲ್, ಕರ್ಚೀಫ್ ಗಳನ್ನು ಉಪಯೋಗಿಸಬಾರದು.
•ಸೋಂಕಿತರು ಆಗಾಗ ಕಣ್ಣಿನ್ನು ಉಜ್ಜಬಾರದು.
•ಪ್ರಕಾಶಮಾನ ಬೆಳಕನ್ನು ನೋಡಲು ಕಷ್ಟವಾಗುವವರು ಕನ್ನಡಕಗಳನ್ನು ಬಳಸಬಹುದು.

  ಕೆಂಗಣ್ಣು ಸೋಂಕು ಔಷಧಿ ತಗೊಳದೇ ಇದ್ದರು ವಾರದೊಳಗೆ ಅದರಷ್ಟಕ್ಕೆ ವಾಸಿಯಾಗುತ್ತದೆ.ಆದರೆ, ಸೋಂಕು ಜ್ವರದೊಂದಿಗೆ ತೀವ್ರವಾಗಿದ್ದರೆ ಆದಷ್ಟು ಬೇಗ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು.ಹಾಗೇ, ಇನ್ನೊಬ್ಬರಿಗೆ ಹರಡದಂತೆ ಜಾಗ್ರತೆ ವಹಿಸಬೇಕು.


   -ಡಾ|| ಗ್ರೀಷ್ಮಾ ಗೌಡ ಆರ್ನೋಜಿ.

ವೈದ್ಯರು
ಹೊಯ್ಸಳ ಹೆಲ್ತ್ ಕೇರ್ ಮೂಡಿಗೆರೆ.