ರೋಟರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ

0

ನವೆಂಬರ್ 17ರಂದು ರೋಟರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಇಂಟರಾಕ್ಟ್ ಕ್ಲಬ್ ಅಧ್ಯಕ್ಷೆ ಸನಿಹ ಶೆಟ್ಟಿ ವಹಿಸಿದ್ದರು.


ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಅನನ್ಯ. ಕೆ.ಬಿ., ಮನಸ್ವಿ ಯು ಬಿ, ವೈಷ್ಣವಿ ಶೆಟ್ಟಿ, ಸಾನಿಕಾ ರೈ, ಪ್ರಣಮ್ಯ ಎನ್.,ಅನುಜ್ಞಾ ಎನ್. ಹೆಚ್,ಶಮಿತಾ, ಪ್ರಣಮ್ಯ ಎನ್ ಆಳ್ವ, ತನುಷ್. ಕೆ , ಇಂಟರಾಕ್ಟ್ ಸಾರ್ಜೆಂಟ್ ತುಷಾರ್ ಕಾರ್ತಿಕ್, ಶಾಲಾ ಉಪನಾಯಕ ಗಗನ್ , ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ಬಹುಮಾನ ವಿತರಿಸಲಾಯಿತು. ಶಿಕ್ಷಕರಿಗಾಗಿ ಏರ್ಪಡಿಸಿದ್ದ ಲಕ್ಕಿ ಗೇಮ್ ನಲ್ಲಿ ಶ್ರೀಮತಿ ಜಯಶ್ರೀ ಕುಕ್ಕೆಟ್ಟಿ ಪ್ರಥಮ ಸ್ಥಾನ ಪಡೆದರೆ ಶ್ರೀಮತಿ ಚಂದ್ರಕಲಾ. ಕೆ.ಬಿ. ದ್ವಿತೀಯ ಸ್ಥಾನ ಗಳಿಸಿದರು.


ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆಯವರು ಶುಭ ಹಾರೈಸಿದರು. ಕಲಾ ಶಿಕ್ಷಕರಾದ ಶ್ರೀಹರಿ ಪೈಂದೋಡಿಯವರು ದಿನದ ಮಹತ್ವವನ್ನು ವರ್ಣಿಸಿದರು.
ಶಿಕ್ಷಕಿಯರಾದ ಚಂದ್ರಕಲಾ ಡಿ, ಜಯಶ್ರೀ. ಕೆ, ನಳಿನಾಕ್ಷಿ ಕಲ್ಮಡ್ಕ, ಗೀತಾ, ಚಂದ್ರಾಕ್ಷಿ.ರೈ ಪ್ರಾರ್ಥಿಸಿದರು. ಸಂಜೀವಿ. ಪಿ.ಆರ್ ಸ್ವಾಗತಿಸಿ, ಉಷಾ.ಕೆ.ವಂದಿಸಿದರು. ಶಿಕ್ಷಕಿ ರಮ್ಯ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.