ಪಂಜ:ಮೈಸೂರು ವಿಭಾಗ ಮಟ್ಟದ ಕಬಡ್ಡಿ -ಸಮಾರೋಪ ಸಮಾರಂಭ

0


🔹17 ರ ವಯೋಮಿತಿ ಬಾಲಕರು:
ಉಡುಪಿ (ಪ್ರ),ದಕ್ಷಿಣ ಕನ್ನಡ (ದ್ವಿ)
🔸14ರ ವಯೋಮಿತಿ ಬಾಲಕರು : ಚಿಕ್ಕಮಂಗಳೂರು (ಪ್ರ), ದಕ್ಷಿಣ ಕನ್ನಡ (ದ್ವಿ)
🔹17 ರ ವಯೋಮಿತಿ ಬಾಲಕಿಯರು :
ದಕ್ಷಿಣ ಕನ್ನಡ (ಪ್ರ), ಹಾಸನ (ದ್ವಿ)
🔸14ರ ವಯೋಮಿತಿ ಬಾಲಕಿಯರು:
ಚಿಕ್ಕಮಂಗಳೂರು (ಪ್ರ), ದಕ್ಷಿಣ ಕನ್ನಡ (ದ್ವಿ)

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸುಳ್ಯ ತಾಲೂಕು ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಪಂಜ ಇವರ ಸಹಯೋಗದಲ್ಲಿ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ-2022 ನ.19 ರಂದು ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ಕೋಟಿ ಚೆನ್ನಯ ಕ್ರೀಡಾಂಗಣದ ದಿ.ಬೇರ್ಯ ಜಾನಕಿ ‌ಮತ್ತು ಪಠೇಲ್ ಕುಶಾಲಪ್ಪ ಗೌಡ ವೇದಿಕೆಯಲ್ಲಿ ಬಹುಮಾನ ವಿತರಣೆ ಮತ್ತುಸಮಾರೋಪ ಸಮಾರಂಭ ಜರುಗಿತು.


ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ ಸಭಾಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು ಸಹಪ್ರಧ್ಯಾಪಕ ರಾಘವ ಎನ್ , ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಲೀಲಾವತಿ ಮತ್ತು ಬಾಲಕೃಷ್ಣ ಗೌಡ ನೇರಳ ಬಹುಮಾನ ವಿತರಣೆ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ ಎನ್, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಚಲಪತಿ, ಪ್ರಗತಿಪರ ಕೃಷಿಕ ಶ್ರೀಮತಿ ಮಹಾದೇವಿ ಏನಡ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ ಎಸ್ ಪಿ,ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ, ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ಸುಬ್ರಹ್ಮಣ್ಯ ಅನುಗ್ರಹ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್, ಹಾಗೂ ಮೈಸೂರು ವಿಭಾಗ ಮಟ್ಟದ ಕಬಡ್ಡಿ ಪಂದ್ಯಾಟದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಮಾಧವ ಬಿ ಕೆ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸೂಫಿ ಪೆರಾಜೆ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಭುವನೇಶ್ , ಎಸ್ ಡಿ ಎಂ ಸಿ ಅಧ್ಯಕ್ಷ ಗಣೇಶ ಜೋಯಿಸ, ಪಂಜ ಜೂನಿಯರ್ ಕಾಲೇಜು ಕೋಟಿ ಚೆನ್ನಯ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಿನ್ನಪ್ಪ ಕಾಣಿಕೆ , ಹಿರಿಯ ಪದವೀಧರ ಶಿಕ್ಷಕ ಟೈಟಸ್ ವರ್ಗೀಸ್,ಪ್ರಾಂಶುಪಾಲ ವೆಂಕಪ್ಪ ಗೌಡ ಕೇನಾಜೆ , ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ಲು, ವಿಷ್ಣು ನಾಯಕ್ ಬಂಟ್ವಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಗಳೂರಿನ ಹರಿಶ್ ರೈ ಮತ್ತು ಚಿಕ್ಕಮಂಗಳೂರಿನ ಗೋಪಿ ಯವರು ಪಂದ್ಯಾಟದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಹಿರಿಯ ಪದವೀಧರ ಶಿಕ್ಷಕ ಟೈಟಸ್ ವರ್ಗೀಸ್ ಸ್ವಾಗತಿಸಿದರು.ಜಯರಾಮ ಕಲ್ಲಾಜೆ. ವಿಭಾಗ ಮಟ್ಟದ ಕಬಡ್ಡಿ ಪಂದ್ಯಾಟದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಮಾಧವ ಬಿ ಕೆ ವಿಜೇತರ ಪಟ್ಟಿ ವಾಚಿಸಿದರು.ಶಿಕ್ಷಕ ಪುರಂದರ ಪನ್ಯಾಡಿ ವಂದಿಸಿದರು.


ಫಲಿತಾಂಶ : 17ರ ವಯೋಮಿತಿ ಬಾಲಕರು ಉಡುಪಿ ( ಪ್ರಥಮ), ದಕ್ಷಿಣ ಕನ್ನಡ (ದ್ವಿತೀಯ), 14ರ ವಯೋಮಿತಿ ಬಾಲಕರು ಚಿಕ್ಕಮಂಗಳೂರು (ಪ್ರಥಮ), ದಕ್ಷಿಣ ಕನ್ನಡ (ದ್ವಿತೀಯ), 17ರ ವಯೋಮಿತಿ ಬಾಲಕಿಯರು ದಕ್ಷಿಣ ಕನ್ನಡ (ಪ್ರಥಮ),ಹಾಸನ (ದ್ವಿತೀಯ)14 ರ ವಯೋಮಿತಿ ಬಾಲಕಿಯರು ‌ ಚಿಕ್ಕಮಂಗಳೂರು (ಪ್ರಥಮ), ದಕ್ಷಿಣ ಕನ್ನಡ ( ದ್ವಿತೀಯ) ಸ್ಥಾನ ಪಡೆದಿದ್ದಾರೆ.


17ರ ವಯೋಮಿತಿಯ ಬಾಲಕರು ದಕ್ಷಿಣ ಕನ್ನಡ ತಂಡದ ವಿಷ್ಣು ಬೆಸ್ಟ್ ರೈಡರ್, ಉಡುಪಿ ತಂಡದ ರಿತೇಶ್ ಬೆಸ್ಟ್ ಕ್ಯಾಚರ್, ಉಡುಪಿ ತಂಡದ ವಿಘ್ನೇಶ್ವರ ಬೆಸ್ಟ್ ಆಲ್ ರೌಂಡರ್, 14ರ ವಯೋಮಿತಿ ಬಾಲಕರ ದಕ್ಷಿಣ ಕನ್ನಡ ತಂಡದ ಚಿಂತನ್ ಬೆಸ್ಟ್ ರೈಡರ್, ಚಿಕ್ಕಮಂಗಳೂರು ತಂಡದ ಕಾರ್ತಿಕ್ ಎಂ ಎಸ್ ಬೆಸ್ಟ್ ಕ್ಯಾಚರ್, ಚಿಕ್ಕಮಂಗಳೂರು ತಂಡದ ನಿತಿನ್ ಎಂ ಎ ಬೆಸ್ಟ್ ಆಲ್ ರೌಂಡರ್, 17 ರ ವಯೋಮಿತಿ ಬಾಲಕಿಯರು ಹಾಸನ ತಂಡದ ಯಶಸ್ವಿನಿ ಬೆಸ್ಟ್ ರೈಡರ್, ದಕ್ಷಿಣ ಕನ್ನಡ ತಂಡದ ಶ್ರಾವ್ಯ ಬೆಸ್ಟ್ ಕ್ಯಾಚರ್, ದಕ್ಷಿಣ ಕನ್ನಡ ತಂಡದ ಪ್ರಣೀತಾ ಬಿ ರೈ ಬೆಸ್ಟ್ ಆಲ್ ರೌಂಡರ್, 14ರ ವಯೋಮಿತಿ ಬಾಲಕಿಯರು ಚಿಕ್ಕಮಗಳೂರು ತಂಡದ ಬಿಂದು ಬೆಸ್ಟ್ ರೈಡರ್, ದಕ್ಷಿಣ ಕನ್ನಡ ತಂಡದ ಆತ್ಮಿಕ ಬೆಸ್ಟ್ ಕ್ಯಾಚರ್, ಚಿಕ್ಕಮಂಗಳೂರು ಚಿಕ್ಕಮಂಗಳೂರು ತಂಡದ ಶುಭ ಬೆಸ್ಟ್ ಆಲ್ ರೌಂಡರ್ ವೈಯಕ್ತಿಕ ಸ್ಥಾನ ಪಡೆದಿದ್ದಾರೆ.

ಪಂದ್ಯಾಟದ ಹೈಲೆಟ್ಸ್:8 ಜಿಲ್ಲೆಗಳ ಒಟ್ಟು 32 ತಂಡಗಳು ಪಾಲ್ಗೊಂಡು ರೋಮಾಂಚನಕಾರಿ ಪಂದ್ಯಾಟಗಳು ಜರುಗಿತು. ಎರಡು ಕ್ರೀಡಾಂಗಣ ನಿರ್ಮಿಸಿ ಮ್ಯಾಟ್ ಅಳವಡಿಸಲಾಗಿತ್ತು. ವೇದಿಕೆಗೆ ದಿ.ಬೇರ್ಯ ಜಾನಕಿ ‌ಮತ್ತು ಪಠೇಲ್ ಕುಶಾಲಪ್ಪ ಗೌಡ ಹೆಸರಿಡಲಾಗಿತ್ತು.


ಕಾರ್ಯಕ್ರಮದ ಯಶಸ್ಸಿಗೆ ಸಂಘಟಕರ ಜೊತೆಗೆ ಪಂಜ ಪರಿಸರದ ಅನೇಕ ಸಂಘ ಸಂಸ್ಥೆಗಳು ,ಶಿಕ್ಷಕರು, ಉಪನ್ಯಾಸಕರು,ವಿದ್ಯಾರ್ಥಿಗಳು ,
ಹಗಲಿರುಳು ಸೇವೆ ಸಲ್ಲಿಸಿದ್ದಾರೆ.

ವಿಶೇಷವಾಗಿ ಮೊದಲ ದಿನ ಹೊನಲು ಬೆಳಕಿನ ಪಂದ್ಯಾಟ ನಡೆಸಲಾಗಿತ್ತು.ಪಂದ್ಯಾಟ ವೀಕ್ಷಕರಿಗೂ ಊಟದ ವ್ಯವಸ್ಥೆ ಇತ್ತು.ವೈದ್ಯಕೀಯ ಸೇವೆ, ಅಂಬ್ಯುಲೆನ್ಸ್ ಸೇವೆ ಇತ್ತು.ಆಕರ್ಷಕ ಸಿಂಗಾರಿ ಮೇಳ‌ ಇತ್ತು.


“ಪಂದ್ಯಾಟಕ್ಕೆ ಆಗಮಿಸಿದ ತಂಡಗಳಿಗೆ ಊಟ ,ಉಪಹಾರ ವ್ಯವಸ್ಥೆ , ಸಮಯಪಾಲನೆ, ಶಿಸ್ತು,ಯಾವುದೇ ತೀರ್ಪುಗಳು ಲೋಪಗಳಿಲ್ಲಿದೆ ಅತ್ಯಂತ ಅಚ್ಚುಕಟ್ಟಾಗಿ ಆಗಿತ್ತು, ಹಿಂದೆ ಎಲ್ಲೂ ಇಂತಹ ಇಷ್ಟೊಂದು ಅಚ್ಚುಕಟ್ಟಿನ ವ್ಯವಸ್ಥೆ ಕ್ರೀಡಾ ಕೂಟ ನಾವು ನೋಡಿಲ್ಲ” ಎಂದು ಬೇರೆ ಜಿಲ್ಲೆಗಳಿಂದ ಆಗಮಿಸಿದ ದೈಹಿಕ ಶಿಕ್ಷಣ ಶಿಕ್ಷಕರು, ಗಣ್ಯರು ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.