ಪೆರುವಾಜೆ : ಜಲಜೀವನ್ ಯೋಜನೆ ಕಾಮಗಾರಿ ನ. 21 ರಂದು ಆರಂಭ, ಪ್ರತಿಭಟನೆ ಹಿಂದಕ್ಕೆ – ಸಚಿನ್ ರಾಜ್ ಶೆಟ್ಟಿ

0

ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರ್ಕೆತ್ತಿ ವಾರ್ಡ್ ನಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಜಲಜೀವನ್ ಯೋಜನೆ ಕಾಮಗಾರಿ ನಿಧಾನಗತಿಯಿಂದ ವಾರ್ಡ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತ ಇದ್ದು ಕೂಡಲೇ ಕಾಮಗಾರಿ ಆರಂಭಗೊಳಿಸದೆ ಇದ್ದಲ್ಲಿ ನ. 21 ರಂದು ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿತ್ತು.
ಇಂದು ಪೆರುವಾಜೆಯಲ್ಲಿ ನಡೆದ ಗ್ರಾಮ ವಾಸ್ತವ್ಯದಲ್ಲಿ ತಹಶೀಲ್ದಾರ್ ಮುಂದೆ ಈ ವಿಚಾರ ಪ್ರಸ್ತಾಪ ಮಾಡಿದಾಗ ಜಲಜೀವನ್ ಯೋಜನೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನ. 21ರಂದು ಪೈಪು ಲೈನ್ ಕಾಮಗಾರಿ ಪ್ರಾರಂಭ ಮಾಡುತ್ತೇವೆ ಎನ್ನುವ ಭರವಸೆ ನೀಡಿರುವುದರಿಂದ ಪ್ರತಿಭಟನೆ ಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಪಂಚಾಯತ್ ಸದಸ್ಯ ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದಾರೆ.