ಬೆಳ್ಳಾರೆ: ಜ್ಞಾನಗಂಗಾ ವಿದ್ಯಾಸಂಸ್ಥೆಗೆ ದ್ವಿತೀಯ ರನ್ನರ್ಸ್ ಆಪ್

0

ಪುತ್ತೂರಿನ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪ್ರತಿಭಾ 2022 ರಲ್ಲಿ ನಡೆದ ಅಂತರ್ ಶಾಲಾ ಸ್ಪರ್ಧೆಯಲ್ಲಿ ಬೆಳ್ಳಾರೆ ಜ್ಞಾನಗಂಗಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಕಸದಿಂದ ರಸ ವಿಷಯದಲ್ಲಿ ಊರ್ವಿ ಮಾನ್ಯ 9ನೇ ತರಗತಿ ಮತ್ತು ಸಾನ್ವಿ 9ನೇ ತರಗತಿ ಪ್ರಥಮ,
ಹೊಸ ಉತ್ಪನ್ನ ಬಿಡುಗಡೆಯಲ್ಲಿ ಶ್ರೇಯಾನ್ 10ನೇ ತರಗತಿ, ಆದಿತ್ಯನಾರಾಯಣ 10ನೇ ತರಗತಿ, ಪೃಥ್ವಿನ್ ಗೌಡ 10ನೇ ತರಗತಿ, ವಿಕಾಸ್ 10ನೇ ತರಗತಿ, ಅನುಷ್ 10ನೇ ತರಗತಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.


ಆಂಗ್ಲ ವಿಚಾರ ಸಂಕಿರಣದಲ್ಲಿ ಆಷರ್ ಪಿಂಟೊ 10ನೇ ತರಗತಿ ದ್ವಿತೀಯ, ಆವೆ ಮಣ್ಣಿನಿಂದ ರಚನೆ ಅನ್ವಿತ್ 8ನೇ ತರಗತಿ ದ್ವಿತೀಯ, ಪೈಟಿಂಗ್ ನಲ್ಲಿ ಪುನೀತ್ 9ನೇ ತರಗತಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಶಾಲೆಗೆ ದ್ವಿತೀಯ ರನ್ನರ್ ಆಫ್ ಪ್ರಶಸ್ತಿ ದೊರೆತಿದೆ. ವಿಜೇತ ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕರಾದ ಎಂ.ಪಿ. ಉಮೇಶ್, ಪ್ರಾಂಶುಪಾಲರಾದ ದೇಚಮ್ಮ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.