ನ. 26, 27 : ಗಾಂಧಿನಗರದಲ್ಲಿ ರಾಜ್ಯಮಟ್ಟದ ಎಸ್ ಜೆ ಎಂ ಪ್ರತಿಭಾ ಸಂಗಮ 2022

0

ಸುನ್ನೀ ಜಂಹಿಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಇದರ ಆಶಯದಲ್ಲಿ ಕಳೆದ ಎರಡು ತಿಂಗಳಿನಿಂದ ವಿವಿಧ ತಾಲೂಕುಗಳಲ್ಲಿ ರೇಂಜ್ ಮಟ್ಟದಿಂದ ಆರಂಭಗೊಂಡ ಮದರಸಾ ವಿದ್ಯಾರ್ಥಿಗಳ ‘ಪ್ರತಿಭಾ ಸಂಗಮ 2022’
ಜಿಲ್ಲಾಮಟ್ಟವನ್ನು ಮುಗಿಸಿ ನವಂಬರ್ 26,27ರಂದು ಸುಳ್ಯ ಗಾಂಧಿನಗರ ಮುನವಿರಲ್ ಇಸ್ಲಾಂ ಮದರಸ ವಠಾರದಲ್ಲಿ ರಾಜ್ಯಮಟ್ಟದ ಪ್ರತಿಭಾ ಸಂಗಮ ನಡೆಯಲಿದೆ.

ಈ ಪ್ರತಿಭಾ ಸಂಗಮದಲ್ಲಿ ರಾಜ್ಯದ ಹತ್ತು ಜಿಲ್ಲೆಗಳಿಂದ ಸುಮಾರು 500ಕ್ಕೂ ಹೆಚ್ಚು ಪ್ರತಿಭಾವಂತ ಮದರಸಾ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲಿದ್ದಾರೆ.
ವಿವಿಧ ಭಾಷೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜ್ಞಾನ ಮಾದರಿಗಳು, ಚಿತ್ರಕಲೆ, ಪ್ರಭಾಷಣಗಳು ಗಜಲ್ ಕವಾಲಿ ಮುಂತಾದ ಕಾರ್ಯಕ್ರಮಗಳೊಂದಿಗೆ ಎರಡು ದಿನಗಳ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದೆ.
ಈ ಕಾರ್ಯಕ್ರಮದ ತೀರ್ಪುಗಾರರಾಗಿ ರಾಜ್ಯಮಟ್ಟದ ನಾಯಕರುಗಳು ಭಾಗವಹಿಸಲಿದ್ದು ವಿವಿಧ ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ ಎಂದು ರಾಜ್ಯ ಪ್ರತಿಭಾ ಸಂಗಮದ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಹಮೀದ್ ಎಸ್ ಎಂ, ಹಾಗೂ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.