ಐವರ್ನಾಡಿನಲ್ಲಿ ಮಾಡತ್ತಕಾನ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮುಕ್ತ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ, ನ.27 ರಂದು ಅಂತರ್ ಜಿಲ್ಲಾ ಮಟ್ಟದ ಫೈನಲ್ ಪಂದ್ಯಾಟ

0

ಐವರ್ನಾಡಿನ ಮಾಡತ್ತಕಾನ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಜೋಯ್ ಎಂ.ನಿರಪ್ಪಿಲ್ ಪರ್ಲಿಕಜೆ ಇವರ ಪ್ರಥಮ ವರ್ಷದ ಸ್ಮರಣಾರ್ಥ ಮುಕ್ತ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನ.20 ರಂದು ಐವರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.
11 ಜನರ ನಿಗದಿತ ತಂಡಗಳ ಒಟ್ಟು 14 ತಂಡಗಳ ಪಂದ್ಯಾಟ ನಡೆಯಿತು.


ನ.27 ರಂದು ಫೈನಲ್ ಪಂದ್ಯಾಟ ನಡೆಯಲಿದೆ.
ಮಾಡತ್ತಕಾನ ಸ್ಪೋರ್ಟ್ಸ್ ಕ್ಲಬ್ ಸದಸ್ಯ ದುಬೈಯ ಪ್ರತಿಷ್ಟಿತ ಕಂಪೆನಿಯಾದ ಅಬ್ರೆಕೋ ಪ್ರೈಟ್ ಎಲ್.ಎಲ್.ಸಿ ಯಲ್ಲಿ ಉನ್ನತ ಉದ್ಯೋಗಿಯಾಗಿರುವ ಜೇಮ್ಸ್ ಜೋಯ್ ರವರ 50,000 ರೂಗಳ ಪ್ರಾಯೋಜಕತ್ವದಲ್ಲಿ ನಡೆಯಿತು.
ಪ್ರಥಮ ಬಹುಮಾನ ರೂ.25,000 ಹಾಗೂ ಜೋಯ್ ಮೆಮೋರಿಯಲ್ ಟ್ರೋಫಿ, ದ್ವಿತೀಯ ಬಹುಮಾನ 15,000 ಹಾಗೂ ಜೋಯ್ ಮೆಮೋರಿಯಲ್ ಟ್ರೋಫಿ ನೀಡಲಾಗುವುದು.
ಹಾಗೂ ಪಂದ್ಯಶ್ರೇಷ್ಟ,ಸರಣಿಶ್ರೇಷ್ಟ,ಬೆಸ್ಟ್ ಬೌಲರ್, ಬೆಸ್ಟ್ ಫೀಲ್ಡರ್ ಹಾಗೂ ಪ್ರತೀ ಪಂದ್ಯಕ್ಕೆ ಪಂದ್ಯ ಶ್ರೇಷ್ಟ ನೀಡಲಾಗುವುದು ಎಂದು ಮಾಡತ್ತಕಾನ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಜುನೈದ್ ನಿಡುಬೆ ತಿಳಿಸಿದ್ದಾರೆ.
ಪಂದ್ಯಾಟದಲ್ಲಿ ಅಂತರಾಷ್ಟ್ರೀಯ ಮಟ್ಟದ ವೀಕ್ಷಕ ವಿವರಣೆಗಾರ ಶಾಫಿ ಪರ್ಪುಂಜ ,ಸಾಗರ್,ಜುನೈದ್ ನಿಡುಬೆ ವೀಕ್ಷಕ ವಿವರಣೆ ನೀಡಿದರು.ಕ್ರೀಡಾಪಟುಗಳಿಗೆ ಮತ್ತು ಕ್ರೀಡಾವೀಕ್ಷಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.