ಮೇನಾಲ ಭಜನಾ ಮಂದಿರ ಸಭಾಭವನ ನಿರ್ಮಾಣ : ಶ್ರಮ ಸೇವೆ

0

ಶ್ರೀಕೃಷ್ಣ ಭಜನಾ ಮಂದಿರ‌ ಮೇನಾಲ ಇಲ್ಲಿಯ‌ ಸಭಾಭವನ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಇಲ್ಲಿ ಭಜನಾ ಮಂದಿರದ ಸದಸ್ಯರುಗಳು ಮತ್ತು ವರಮಹಾಲಕ್ಷ್ಮಿ ಪೂಜಾ ಸಮಿತಿ ಮೇನಾಲ ಇದರ ಸದಸ್ಯರುಗಳು ಸೇರಿ ಶ್ರಮ ಸೇವೆ ನಡೆಸಿದರು.

ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ಏಕಾಹ ಭಜನಾ ಕಾರ್ಯಕ್ರಮದ ಪ್ರಯುಕ್ತ ಭಜನಾ ಮಂದಿರದ ಆವರಣವನ್ನು ಶುಚಿಗೊಳಿಸಿ ನೂತನವಾಗಿ ನಿರ್ಮಿಸುತ್ತಿರುವ ಸಭಾಭವನ ನಿರ್ಮಾಣಕ್ಕೆ ಬೇಕಾಗುವ ಮರಳು ಮತ್ತು ಕಲ್ಲುಗಳನ್ನು ಜೋಡಿಸಿಡಲಾಯಿತು. ಭಜನಾ ಮಂದಿರ ಹಾಗೂ ವರಮಹಾಲಕ್ಷ್ಮಿ ಪೂಜಾ ಸಮಿತಿ ಯು ಪದಾಧಿಕಾರಿಗಳು ಶ್ರಮದಾನದಲ್ಲಿ ಸಹಕರಿಸಿದ ರು.