ಪಂಜ :ದೇವಳದ ಜಾತ್ರೆಗೆ ಪೂರ್ವಭಾವಿ ಸಭೆ, ಜ.24: ಗೊನೆ ಕಡಿಯುವುದು, ಫೆ.1: ಧ್ವಜಾರೋಹಣ

0

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವರ್ಷಾವಧಿ ಜಾತ್ರೋತ್ಸವದ ಪೂರ್ವಭಾವಿ ಸಭೆ ನ.20 ರಂದು ದೇವಳದ ಪಾರ್ವತಿ ಸಭಾಭವನದಲ್ಲಿ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿ ಬೈಲುಗುತ್ತು ಅವರ ಅಧ್ಯಕ್ಷತೆಯಲ್ಲಿ ಜರುಗಿತು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಕೃಷ್ಣ ಗೌಡ ಕುದ್ವ, ನಾರಾಯಣ ಗೌಡ ಕೋರ್ಜೆ, ಶಂಕರ್ ಕುಮಾರ್, ಲಕ್ಷ್ಮಣ ಗೌಡ ಆಕ್ರಿಕಟ್ಟೆ, ದಿನೇಶ್ ಗರಡಿ , ರಾಮಚಂದ್ರ ಭಟ್, ಶ್ರೀಮತಿ ರೋಹಿಣಿ ಆರ್ನೋಜಿ , ಶ್ರೀಮತಿ ಸೌಮ್ಯ ಸಾಯಿಕೃಪ,ಸಲಹಾ ಸಮಿತಿಯ ಸದಸ್ಯ ಚಂದ್ರಶೇಖರ ಶಾಸ್ತ್ರಿ ಸಿ , ಧಾರ್ಮಿಕ ಪರಿಷತ್ ಸದಸ್ಯ ರಘುನಾಥ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೇವಳದ ಮಾಜಿ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಮಾಜಿ ಸದಸ್ಯ ವಸಂತ ಅಲೆಂಗಾರ , ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸೀಮೆಯ ಭಕ್ತಾದಿಗಳು , ದೇವಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಇದೇ ವೇಳೆ ಜಾತ್ರೋತ್ಸವಕ್ಕೆ ವಿವಿಧ ಸಮಿತಿಗಳ ಸಂಚಾಲಕರು ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಯಿತು. ಭಕ್ತರಿಂದ ಸಲಹೆ ಸೂಚನೆಗಳ ವ್ಯಕ್ತವಾಯಿತು. ಜ.24ರಂದು ಗೊನೆ ಕಡಿದು .ಫೆ. 1ರಂದು ಧ್ವಜಾರೋಹಣ ನಡೆದು ಜಾತ್ರೋತ್ಸವ ಜರುಗಲಿದೆ.
ಕಾರ್ಯಕ್ರಮದಲ್ಲಿ ಬಾಲಕೃಷ್ಣ ಗೌಡ ಕುದ್ವ ಸ್ವಾಗತಿಸಿದರು ಮತ್ತು ವರದಿ ವಾಚಿಸಿದರು.ಶಂಕರ್ ಕುಮಾರ್ ವಂದಿಸಿದರು.