ಮೇನಾಲ ವಿಷ್ಣು ಯುವಕ ಮಂಡಲದ ಅಧ್ಯಕ್ಷರಾಗಿ ರಂಜಿತ್ ರೈ ಮೇನಾಲ ಆಯ್ಕೆ

0

ಅಜ್ಜಾವರ ಗ್ರಾಮದ ಮೇನಾಲ ವಿಷ್ಣು ಯುವಕ ಮಂಡಲದ ಸಭೆಯು ನ.20ರಂದು ಯುವಕ ಮಂಡಲದ ಗೌರವಾಧ್ಯಕ್ಷ ಶ್ರೀಧರ ಮೇನಾಲರ ಅಧ್ಯಕ್ಷತೆಯಲ್ಲಿ ಮೇನಾಲದಲ್ಲಿ ನಡೆಯಿತು.

2022-23ನೇ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆದು ನೂತನ ಅಧ್ಯಕ್ಷರಾಗಿ ರಂಜಿತ್ ರೈ ಮೇನಾಲ, ಪ್ರಧಾನ ಕಾರ್ಯದರ್ಶಿ ಯಾಗಿ ಮೋಹನ್ ಮೂಲ್ಯ, ಕೋಶಾಧಿಕಾರಿಯಾಗಿ ಕೀರ್ತನ್ ಇರಂತಮಜಲು, ಉಪಾಧ್ಯಕ್ಷರುಗಳಾಗಿ ಅಕ್ಷಯ್ ರೈ ಮೇನಾಲ, ಉಮೇಶ್ ಇರಂತಮಜಲು, ಶೌಕತ್ ಮೇನಾಲ, ಜತೆಕಾರ್ಯದಶಿ ರಮೇಶ್ ಮೇನಾಲ, ಸಾಂಸ್ಕೃತಿಕ ಕಾರ್ಯದರ್ಶಿ ರಾಜೇಶ್ ಪನಿಕರ್,
ಸಂಘಟನಾ ಕಾರ್ಯದರ್ಶಿ ಹರ್ಷಿತ್ ರೈ, ನಿರ್ದೇಶಕರುಗಳಾಗಿ ಕೃಷ್ಣಪ್ಪ ಕಲ್ಲಗದ್ದೆ, ನಾಗೇಶ್ ಬೇಲ್ಯ, ಶರಣ್ಯ ತುದಿಯಡ್ಕ, ಪ್ರಕಾಶ್ ಕಲ್ಲಗದ್ದೆ, ರಾಮ ಬಾಡೆಲ್, ಅನಿಲ್, ಜಯಕೃಷ್ಣ ಆಯ್ಕೆಯಾದರು.

ಸಭೆಯಲ್ಲಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಪ್ರಸಾದ್ ರೈ ಮೇನಾಲ, ಸುಧೀರ್ ರೈ ಮೇನಾಲ, ಗುರುಪ್ರಸಾದ್ ಅಜ್ಜಾವರ, ಹರಿಪ್ರಸಾದ್ ಸುಲಾಯ, ಮನೋಹರ ಪಲ್ಲತಡ್ಕ, ಲಕ್ಷ್ಮಣ ಪಿ.ಸಿ., ಶೇಖರ ಪಲ್ಲತಡ್ಕ ಮೊದಲಾದವರಿದ್ದರು.