ದುಗ್ಗಲಡ್ಕದ ಮಿತ್ರ ಯುವಕ ಮಂಡಲ ಮತ್ತು ಕುರಲ್ ತುಳುಕೂಟದ ವತಿಯಿಂದ ಶೈಕ್ಷಣಿಕ ಪ್ರವಾಸ

0


ದುಗ್ಗಲಡ್ಕದ ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟದ ವತಿಯಿಂದ ಒಂದು ದಿನದ ಶೈಕ್ಷಣಿಕ ಪ್ರವಾಸವನ್ನು ನ.20ರಂದು ಆಯೋಜಿಸಲಾಗಿತ್ತು.


ಮೈಸೂರಿಗೆ ಹಮ್ಮಿಕೊಂಡಿದ್ದ ಪ್ರವಾಸದಲ್ಲಿ ಜಂಟಿ ಸಂಸ್ಥೆಗಳ ಸದಸ್ಯರು ಮತ್ತು ಮನೆಯವರು ಸೇರಿ ಸುಮಾರು 60 ಮಂದಿ ಭಾಗವಹಿಸಿದ್ದರು.
ಕುರಲ್ ತುಳುಕೂಟದ ಸಂಚಾಲಕರಾದ ಕೆ.ಟಿ.ವಿಶ್ವನಾಥ, ಅಧ್ಯಕ್ಷೆ ನವ್ಯ ದಿನೇಶ್ ಕೊಯಿಕುಳಿ, ಯುವಕ ಮಂಡಲದ ಅಧ್ಯಕ್ಷ ಚೇತನ್ ಕಲ್ಮಡ್ಕ, ಕಾರ್ಯದರ್ಶಿ ಪ್ರದೀಪ್ ಕೊಯಿಕುಳಿ ನೇತೃತ್ವದಲ್ಲಿ ಶೈಕ್ಷಣಿಕ ಪ್ರವಾಸ ಹೋಗಲಾಯಿತು.