ಸಂಪಾಜೆ ಸಹಕಾರಿ ಸಂಘದ ಶತಮಾನೋತ್ಸವ- ವಿವಿಧ ಸಮಿತಿಗಳ ಪೂರ್ವಭಾವಿ ಸಭೆ

0


ದ ಕ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸಂಪಾಜೆ ಸುಳ್ಯ ತಾಲೂಕು ಇದರ ಶತಮಾನೋತ್ಸವ ಆಚರಣೆಯ ವಿವಿಧ ಸಮಿತಿಗಳ ಪೂರ್ವಭಾವಿ ಸಭೆಯು ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಇವರ ಅಧ್ಯಕ್ಷತೆಯಲ್ಲಿ ಸಂಘದ ಸಮನ್ವಯ ಸಭಾಂಗಣದಲ್ಲಿ ಜರಗಿತು.


ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಇವರು ಡಿಸೆಂಬರ್ ತಿಂಗಳ 24 ಹಾಗೂ 31 ರಂದು ಮತ್ತು ಜನವರಿ ತಿಂಗಳ 1 ರಂದು ನಡೆಯುವ ಕ್ರೀಡಾಕೂಟದ ಬಗ್ಗೆ, ಜನವರಿ 21 ಮತ್ತು 22 ರಂದು ನಡೆಯುವ ಶತಮಾನೋತ್ಸವ ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಮಾಹಿತಿ ನೀಡಿದರು.


ವೇದಿಕೆಯಲ್ಲಿ ಸಂಪಾಜೆ ಗ್ರಾಮ ಪಂಚಾಯಿತ್ ಅಧ್ಯಕ್ಷರಾದ ಜಿ ಕೆ ಹಮೀದ್, ಸಂಘದ ನಿರ್ದೇಶಕರಾದ ಗಣಪತಿ ಭಟ್ ಪಿಎನ್, ಆನಂದ ಪಿಎಲ್, ಉಷಾ ಕೆ ಎಂ, ಸುಮತಿ ಶಕ್ತಿವೇಲು, ಜಗದೀಶ ರೈ, ಯಮುನಾ ಬಿ ಎಸ್, ಹಮೀದ್ ಎಚ್, ಪ್ರಕಾಶ್ ಕೆಪಿ ಹಾಗೂ ರಾಜೀವಿ ಬೈಲೆ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್ ವಂದಿಸಿದರು.ಸಭೆಯಲ್ಲಿ ವಿವಿಧ ಸಮಿತಿಯ ಸಂಚಾಲಕರು, ಸಹ ಸಂಚಾಲಕರು, ಕಾರ್ಯದರ್ಶಿ ಹಾಗೂ ಸದಸ್ಯರು, ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಯಾನಂದ ಸಂಪಾಜೆ ಯವರು ಕಾರ್ಯಕ್ರಮ ನಿರೂಪಣೆ ಮಾಡಿದರು.