ಜಟ್ಟಿಪಳ್ಳ : ಬಾಣಂತಿ ನಿಧನ

0

ಸುಳ್ಯ ಜಟ್ಟಿಪಳ್ಳದ ನಿವಾಸಿ ಲೀಲಾ ಎಂಬವರ ಪುತ್ರಿ ಗೀತಾ (30ವ.) ಮಗುವಿನ ಜನ್ಮವೆತ್ತ 12 ನೇ ದಿನ ಅಸುನೀಗಿದ ಘಟನೆ ವರದಿಯಾಗಿದೆ.


ಗೀತಾ ಅವರನ್ನು ಚೊಕ್ಕಾಡಿಯ ಜಗದೀಶ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಒಂದು ಗಂಡು ಮಗುವಿದ್ದು, ಎರಡನೇ ಮಗುವಿನ ಹೆರಿಗೆಗಾಗಿ ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 12 ದಿನಗಳ ಹಿಂದೆ ಅವರು ಹೆಣ್ಣು ಮಗುವಿಗೆ ಜನ್ಮವಿತ್ತಿದ್ದರು.

ಬಳಿಕ ಅವರು ಮಗು ಸಮೇತ ತಾಯಿ ಮನೆಗೆ ಬಂದಿದ್ದರು. ನ. 20 ರಂದು ಬೆಳಿಗ್ಗೆ ತೀವ್ರ ಅನಾರೋಗ್ಯಕ್ಕೆ ಒಳಗಾದ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ರಾತ್ರಿ 8.30 ರ ವೇಳೆಗೆ ಅವರು ಕೊನೆಯುಸಿರೆಳೆದರು.