ಕುಕ್ಕೆ ಶ್ರೀ ದೇವಳದಲ್ಲಿ ಚಂಪಾಷಷ್ಠಿ ಜಾತ್ರಾ ಪ್ರಯುಕ್ತ ಅಖಂಡ ಭಜನೋತ್ಸವ ಆರಂಭ

0

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷ್ಠಿ ಜಾತ್ರೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ಅಖಂಡ ಭಜನೋತ್ಸವ ಇಂದು ಆರಂಭವಾಯಿತು. ಇಂದು ಸೂರ್ಯೋದಯದಿಂದ ನಾಳೆ ಸೂರ್ಯೋದಯದ ತನಕ ಶ್ರೀ ದೇವಳದ ಧರ್ಮಸಮ್ಮೇಲನ ಮಂಟಪದಲ್ಲಿ ನಡೆಯುವ ಭಜನೋತ್ಸವ ನಡೆಯಲಿದೆ. ಶ್ರೀ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ದೀಪ ಬೆಳಗಿಸಿ ಡಾ.ನಿಂಗಯ್ಯ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ವನಜಾ.ವಿ.ಭಟ್, ಶೋಭಾ ಗಿರಿಧರ್, ಗ್ರಾ.ಪಂ.ಸದಸ್ಯರಾದ ರಾಜೇಶ್ ಎನ್.ಎಸ್, ಗಿರೀಶ್ ಆಚಾರ್ಯ ಪೈಲಾಜೆ, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಶಿಷ್ಠಾಚಾರ ಅಧಿಕಾರಿ ಜಯರಾಮ ರಾವ್, ಶಿಷ್ಠಾಚಾರ ವಿಭಾಗದ ನವೀನ್, ಭಜನೋತ್ಸವದ ಮುಖ್ಯ ಉಸ್ತುವಾರಿಗಳಾದ ರಾಜಲಕ್ಷ್ಮಿ ಶೆಟ್ಟಿಗಾರ್, ಯೋಗೀಶ್.ಎಂ.ವಿಟ್ಲ, ಮುಖ್ಯಗುರು ಕೆ.ಯಶವಂತ ರೈ, ಉಪನ್ಯಾಸಕ ರತ್ನಾಕರ.ಎಸ್, ಲೋಕೇಶ್ ಬಿ.ಎನ್, ಪ್ರಕಾಶ್ ಸುಬ್ರಹ್ಮಣ್ಯ, ಶ್ರೀ ದೇವಳದ ಶಿವಸುಬ್ರಹ್ಮಣ್ಯ ಭಟ್, ಪುರುಷೋತ್ತಮ್, ಬಾಲಕೃಷ್ಣ.ಆರ್, ಅಶೋಕ್ ಅತ್ಯಡ್ಕ, ಮುಕಾಂಬಿಕಾ ಮಾರರ್, ಶೋಭಾ, ಭಾನುಮತಿ, ಮಮತಾ ಬಾಲಕೃಷ್ಣ ಉಪಸ್ಥಿತರಿದ್ದರು.


ಬಳಿಕ ವಿವಿಧ ತಂಡಗಳಿಂದ ಭಜನೆ ಆರಂಭಗೊಂಡಿತು. ಆರಂಭದಲ್ಲಿ ಶ್ರೀ ದೇವಳದ ನೌಕರರ ವೃಂದದವರು ಭಜನಾ ಸೇವೆ ನೆರವೇರಿಸಿದರು. ಬಳಿಕ ರಘು ಬಿಜೂ ಮತ್ತು ತಂಡ, ಕಾಟುಕುಕ್ಕೆ ಮಹಿಳಾ ಭಜನಾ ತಂಡ ಭಜನೆ ನೆರವೇರಿಸಿತು. ಭಜನೆ ನೆರವೇರಿಸಿದ ತಂಡದ ಎಲ್ಲಾ ಸದಸ್ಯರಿಗೆ ಕುಕ್ಕೆ ದೇವಳದಿಂದ ಶಾಲು ಹೊದಿಸಿ ದೇವರ ಪ್ರಸಾದ ನೀಡಲಾಯಿತು.ಅಲ್ಲದೆ ಪ್ರತಿ ತಂಡಕ್ಕೆಶ್ರೀ ದೇವಳದಿಂದ ಪ್ರಮಾಣ ಪತ್ರ ನೀಡಲಾಯಿತು.