ಕಳಂಜದಲ್ಲಿ ಉಚಿತ ಅಭಾ ಕಾರ್ಡ್ ನೋಂದಣಿ ಶಿಬಿರ

0


ಅರೋಗ್ಯ ಮತ್ತು ಕ್ಷೇಮ ಕೇಂದ್ರ ಪಟ್ಟೆ ಕಳಂಜ ಇಲ್ಲಿ ಉಚಿತ ಅಭಾ ಕಾರ್ಡ್ ನೋಂದಣಿ ಶಿಬಿರ ನ. 22ರಂದು ನಡೆಯುತ್ತಿದ್ದು, ಗ್ರಾಮಸ್ಥರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಕಳಂಜ ಗ್ರಾ.ಪಂ. ಪ್ರಕಟಣೆಯಲ್ಲಿ ತಿಳಿಸಿದೆ. ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಬೇಬಿ, ಕಳಂಜ ಆರೋಗ್ಯ ಉಪಕೇಂದ್ರದ ಸಮುದಾಯ ಆರೋಗ್ಯಾಧಿಕಾರಿ ಶ್ರೀಮತಿ ಶಿಲ್ಪಾ ಮತ್ತು ಕು. ಭವಿತಾ ಕಳಂಜ ಅಭಾ ಕಾರ್ಡ್ ನೋಂದಣಿ ಕಾರ್ಯ ನಡೆಸುತ್ತಿದ್ದಾರೆ.


ಇದರ ಪ್ರಯೋಜನಗಳು

  • BPL ಕಾರ್ಡ್ ದಾರರಿಗೆ 5 ಲಕ್ಷದವರೆಗಿನ ಉಚಿತ ಚಿಕಿತ್ಸೆ.
  • APL ಕಾರ್ಡ್ ದಾರರಿಗೆ ಚಿಕಿತ್ಸಾ ವೆಚ್ಚದಲ್ಲಿ ಶೇ.30 ರಷ್ಟು ರಿಯಾಯಿತಿ. ಬೇಕಾಗುವ ದಾಖಲೆಗಳು :
  • ಆಧಾರ್ ಕಾರ್ಡ್ ಪ್ರತಿ.
  • ಆಧಾರ್ ಕಾರ್ಡಿಗೆ ಜೋಡಣೆಯಾಗಿರುವ ನಂಬರಿನ ಮೊಬೈಲ್.
  • ಪಡಿತರ ಚೀಟಿ (ಮನೆಯ ಎಲ್ಲಾ ಸದಸ್ಯರ ಅಭಾ ಕಾರ್ಡ್ ನ್ನು ಒಬ್ಬ ಸದಸ್ಯ ಮಾಡಬಹುದು.ಆದರೆ ಎಲ್ಲರ ಆಧಾರ್ ಕಾರ್ಡಿನ ಪ್ರತಿ ತರಬೇಕು ಮತ್ತು ಆಧಾರ್ ಕಾರ್ಡಿಗೆ ಜೋಡಣೆಯಾಗಿರುವ ಮೊಬೈಲ್ ನಂಬರ್ ಗೆ ಬರುವ OTP ಯನ್ನು ತಿಳಿಸಬೇಕಾಗುತ್ತದೆ.)