ನ.27: ಜಯನಗರದಲ್ಲಿ ದಿ. ರಾಮಚಂದ್ರ ಭಟ್ ಸ್ಮರಣಾರ್ಥ ಪುರುಷರ ಕಬ್ಬಡಿ ಪಂದ್ಯಾಟ

0

ಜಯನಗರ ಶ್ರೀ ಗಜಾನನ ಭಜನಾ ಮಂದಿರ ಮತ್ತು ವಿಕ್ರಮ ಯುವಕ ಮಂಡಲ ರಿ. ಜಯನಗರ ಇದರ ಆಶಯದಲ್ಲಿ ನವೆಂಬರ್ 27ರಂದು ಜಯನಗರ ಶಾಲಾ ಮೈದಾನದಲ್ಲಿ ದಿ. ರಾಮಚಂದ್ರ ಭಟ್ ಸ್ಮರಣಾರ್ಥ 60 ಕೆಜಿ ವಿಭಾಗದ ಪುರುಷರ ಕಬ್ಬಡಿ ಪಂದ್ಯಾಟ ನಡೆಯಲಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಯನಗರ ಪರಿಸರದಲ್ಲಿ ಅಪರ್ಣ ಇಂಡಸ್ಟ್ರಿಸ್ ಎಂಬ ಹೆಸರಿನ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದ ಸಮಾಜ ಸೇವಕ, ಹಾಗೂ ಅಡಿಕೆ ಸುಲಿಯುವ ಯಂತ್ರಗಳನ್ನು ತಮ್ಮ ದೇ ಶೈಲಿಯಲ್ಲಿ ಮಾರುಕಟ್ಟೆಗೆ ಪರಿಚಯಿಸಿದ ದಿ. ರಾಮಚಂದ್ರ ಭಟ್ ರವರ ನೆನಪಿಗಾಗಿ ಈ ಪಂದ್ಯಾಟವನ್ನು ನಡೆಸುತ್ತಿದ್ದು ಪಂದ್ಯಾಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡ ತಂಡಕ್ಕೆ 10,022 ರೂಪಾಯಿಗಳ ಬಹುಮಾನ ಮತ್ತು ಶಾಶ್ವತ ಫಲಕ, ದ್ವಿತೀಯ ಸ್ಥಾನವನ್ನು ಪಡೆದ ತಂಡಕ್ಕೆ 7022 ರೂಪಾಯಿಗಳ ಬಹುಮಾನ ಮತ್ತು ಶಾಶ್ವತ ಫಲಕ, ಅದೇ ರೀತಿ ತೃತೀಯ ಮತ್ತು ಚತುರ್ಥ ಸ್ಥಾನವನ್ನು ಪಡೆದ ತಂಡಗಳಿಗೆ ಶಾಶ್ವತ ಫಲಕಗಳನ್ನು ನೀಡಿ ಗೌರವಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಈ ಪಂದ್ಯಕೂಟದ ಉದ್ಘಾಟನಾ ಸಮಾರಂಭ ಮತ್ತು ಸಮಾರೋಪ ಸಮಾರಂಭದಲ್ಲಿ ಸುಳ್ಯದ ವಿವಿಧ ಮುಖಂಡರುಗಳು ಮತ್ತು ಸ್ಥಳೀಯ ಹಿರಿಯ ಕಿರಿಯ ಮುಖಂಡರುಗಳು ಭಾಗವಹಿಸಲಿದ್ದಾರೆ.