ತೊಡಿಕಾನ: ಸುದ್ದಿ ಕೃಷಿ ಕೇಂದ್ರದ ವತಿಯಿಂದ ಗ್ರಾಮದ ಕೃಷಿಕರೊಂದಿಗೆ ಸಂವಾದ

0

ಸುದ್ದಿ ಕೃಷಿ ಕೇಂದ್ರದ ವತಿಯಿಂದ ಕೃಷಿಯಲ್ಲಿ ವಿನೂತನ ಪ್ರಯೋಗ, ಸಮಾಲೋಚನೆ, ಸಂವಾದ ಕಾರ್ಯಕ್ರಮವು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅಕ್ಷಯ ಸಭಾಭವನದಲ್ಲಿ ನ.23ರಂದು ಜರುಗಿತು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಸುದ್ದಿ ಕೃಷಿ ಕೇಂದ್ರದ ಕುರಿತು ವಿವರಿಸಿದರು. ಸುದ್ದಿ ವರದಿಗಾರ ಕೃಷ್ಣ ಬೆಟ್ಟ ಅವರು ಕೃಷಿಕರಿಗೆ ಇಲಾಖೆಯ ಮೂಲಕ ದೊರೆಯುವ ಸೌಲಭ್ಯಗಳ ಕುರಿತು ಮಾತನಾಡಿದರು.
ಬಳಿಕ ತೊಡಿಕಾನ ಗ್ರಾಮದ ಪ್ರಗತಿಪರ ಕೃಷಿಕರು ತಾವು ಮಾಡುತ್ತಿರುವ ಕೃಷಿ, ಹೈನುಗಾರಿಕೆ ಕಾರ್ಯದ ಕುರಿತು ವಿವರಿಸಿದರು.


ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅವರು ಸಹಕಾರಿ ಸಂಘಗಳ ಮೂಲಕ ಕೃಷಿಕರಿಗೆ ದೊರೆಯುವ ಸೌಲಭ್ಯ ಹಾಗೂ ಕೃಷಿಯಲ್ಲಿ ವಿನೂತನ ಪ್ರಯೋಗದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ಸ್ಥಳೀಯ ಕೃಷಿಕರಾದ ಶ್ರೀಮತಿ ಪ್ರೇಮ ವಸಂತ ಭಟ್ ತೊಡಿಕಾನ, ಶ್ರೀನಿಧಿ ಕದಳಿವನ, ಉಮಾಶಂಕರ್ ಅಡ್ಯಡ್ಕ, ರಾಮ ಮರಾರ್ ತೊಡಿಕಾನ, ರವೀಂದ್ರ ಪಿ. ಪಂಜಿಕೋಡಿ, ಯಂ ತಿಮ್ಮಯ್ಯ ಮೆತ್ತಡ್ಕ, ಎಂ.ಎಲ್. ನಾರಾಯಣ ಮಾವಿನಕಟ್ಟೆ, ಜನಾರ್ದನ ಬಾಳೆಕಜೆ, ಕೇಶವಪ್ರಸಾದ್ ತೊಡಿಕಾನ, ಕೆ. ಸಾವಿತ್ರಿ ಭಟ್ ತೊಡಿಕಾನ, ಮಾಲತಿ ಹೆಚ್.ಬಿ. ತೊಡಿಕಾನ, ಚಂದ್ರಕಲಾ ಕುತ್ತಮೊಟ್ಟೆ, ನಾಗೇಂದ್ರ ಎಸ್., ಎ.ಎನ್. ವಾಸುದೇವ, ಎ.ಆರ್. ತೀರ್ಥಪ್ರಸಾದ್ ತೊಡಿಕಾನ, ಅನುಶ್ರೀ ತೊಡಿಕಾನ , ಅಭಿಷೇಕ್ ವೈಲಾಯ ಸೇರಿದಂತೆ ಗ್ರಾಮದ ಕೃಷಿಕರು ಉಪಸ್ಥಿತರಿದ್ದರು.