ಯೋಗಾಸನ ಸ್ಪರ್ಧೆಯಲ್ಲಿ ನಿಶ್ಚಲ್ ಕೆ.ಜೆ. ರಾಷ್ಟ್ರ ಮಟ್ಟಕ್ಕೆ ಆಯ್ಕೆ

0

ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಹಾವೇರಿಯಲ್ಲಿ ನಡೆದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ವಿಭಾಗದ ನಿಶ್ಚಲ್ ಕೆ.ಜೆ. ನಾಲ್ಕನೇ ಸ್ಥಾನ ಪಡೆದು ಜನವರಿಯಲ್ಲಿ ಶಿವಮೊಗ್ಗದಲ್ಲಿ ನಡೆಯಲಿರುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ನಡೆಸುವ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಹಾಗೂ ಬೆಂಗಳೂರಿನ ಸಾಂದೀಪನಿ ವಿದ್ಯಾಭವನದಲ್ಲಿ ನಡೆದ ವಿದ್ಯಾಭಾರತಿ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಡಿ. 15 ರಿಂದ 18 ರವರೆಗೆ ರಾಜಸ್ಥಾನದ ಉದಯಪುರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಈತ ಪ್ರಸ್ತುತ ಪುತ್ತೂರಿನಲ್ಲಿ ನೆಲೆಸಿರುವ ಪೆರಾಜೆ ಗ್ರಾಮದ ಕರೆಂಬಿ ಮನೆಯ ಇಂಜಿನಿಯರ್ ಜನಾರ್ಧನ ಗೌಡ ಹಾಗೂ ಜ್ಯೋತಿ ದಂಪತಿ ಅವರ ಪುತ್ರ.

LEAVE A REPLY

Please enter your comment!
Please enter your name here