ಬೈಜುಸ್ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ರಕ್ಷಿತ್ ಕೆ.ವಿ. ಅವರಿಗೆ ರಾಷ್ಟ್ರಮಟ್ಟದಲ್ಲಿ ಪ್ರಥಮ ಪ್ರಶಸ್ತಿ

0
1

ಬೈಜುಸ್ ಸಂಸ್ಥೆಯವರು ನಡೆಸಿದ ಬೈಜುಸ್ ಸ್ಕಾಲರ್ಶಿಪ್ ಎಕ್ಸಾಮಿನೇಷನ್ ಮತ್ತು ಬೈಜುಸ್ ನ್ಯಾಷನಲ್ ಎಕ್ಸಾಮಿನೇಷನ್ ಪರೀಕ್ಷೆಯಲ್ಲಿ ಜಾಲ್ಸೂರು ಗ್ರಾಮದ ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ರಕ್ಷಿತ್ ಕೆ.ವಿ. ಅವರು ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವ ಈತ ಹದಿನೈದು ಸಾವಿರ ರೂ. ನಗದು ಬಹುಮಾನ ಗಳಿಸಿ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ. ಈತ ಮಂಡೆಕೋಲು ಗ್ರಾಮದ ಕಲ್ಲಡ್ಕ ವಿಶ್ವನಾಥ ಕೆ. ಹಾಗೂ ಶ್ರೀಮತಿ ಹೇಮಾವತಿ ದಂಪತಿಗಳ ಪುತ್ರ.

LEAVE A REPLY

Please enter your comment!
Please enter your name here