ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲಕ್ಷದೀಪದಂದು ನಾಗರಾಜ ಪ್ರತ್ಯಕ್ಷ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಮಹೋತ್ಸವ ಜಾತ್ರೆ ಆರಂಭವಾಗಿ ಮೂರನೇ ದಿನ ನ.23 ರಂದು ನಾಗವೊಂದು ಕಂಡು ಬಂದು ಭಕ್ತರ ಅಚ್ಚರಿಗೆ ಕಾರಣವಾಯಿತು. ದೇವಸ್ಥಾನದ ಹೊರಾಂಗಣದಲ್ಲಿ ಹರಿದಾಡಿದ ಸರ್ಪ ಕಂಡು ಅಲ್ಲಿದ್ದ ಭಕ್ತರು ನಿಂತಲ್ಲಿದ್ದಲೇ ಕೈ ಮುಗಿದರು. ಸ್ವಲ್ಪ ಹೊತ್ತು ಹರಿದಾಡಿ ಬಳಿಕ ಬಿಲವೊಂದನ್ನು ಹೊಕ್ಕು ಸರ್ಪ ಕಾಣೆಯಾಯ್ತು. ಲಕ್ಷದೀಪದಂದು ಸರ್ಪ ಕಂಡು ಬಂದು ಭಕ್ತರನ್ನು ಪುಳಕ ಗೊಳಿಸಿತು.