ಎಚ್. ಭೀಮರಾವ್ ವಾಷ್ಠರ್ ರಿಗೆ ಅಮರ ಜ್ಞಾನ ಪಂಡಿತಶ್ರೀ ರಾಜ್ಯಪ್ರಶಸ್ತಿ ಪ್ರದಾನ ಮತ್ತು ವಾಷ್ಠರ್ ರವರ ನಾಗರಹಾಳ ಗುರುಬಾಬಾ ಭಕ್ತಿಗೀತೆ ಬಿಡುಗಡೆ

0

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ನಾಗರಹಾಳ ಪಟ್ಟಣದಲ್ಲಿ ನಡೆದ ಸರ್ವ ಧರ್ಮ ಭಾವೈಕ್ಯ ಮಹಾ ಸಂಗಮ -2022 ಸಮಾರಂಭದಲ್ಲಿ ಸುಳ್ಯದ ಖ್ಯಾತ ಜ್ಯೋತಿಷಿ , ಚಿತ್ರನಿರ್ದೇಶಕ ಮತ್ತು ಗಾಯಕರಾದ ಎಚ್ .ಭೀಮರಾವ್ ವಾಷ್ಠರ್ ಕೋಡಿಹಾಳ ಅವರಿಗೆ 2022ನೇ ಸಾಲಿನ ಅಮರ ಜ್ಞಾನ ಪಂಡಿತ್ ಶ್ರೀ ರಾಜ್ಯಪ್ರಶಸ್ತಿಯನ್ನು ಸುಕ್ಷೇತ್ರಶಿಶುನಾಳದ ಶ್ರೀ ಶಿಶುನಾಳ ಷರೀಫ್ ಅಜ್ಜನ ವಂಶಸ್ಥರಾದ ಜನಾಬ್ ಹುಸೇನ್ ಸಾಬ್ ಶರೀಫನವರ್ ರವರು ನೀಡಿ ಗೌರವಿಸಿದರು .

ಇದೇ ಸಂದರ್ಭದಲ್ಲಿ ಎಚ್ .ಭೀಮರಾವ್ ವಾಷ್ಠರ್ ಕೋಡಿಹಾಳ ರವರು ಸಾಹಿತ್ಯ ರಚಿಸಿ , ಹಾಡಿರುವ ಸುಕ್ಷೇತ್ರ ನಾಗರಹಾಳ ಗುರುಬಾಬಾ ವಿಡಿಯೋ ಭಕ್ತಿಗೀತೆಯನ್ನು ಸುಕ್ಷೇತ್ರ ಅಂಕಲಿಮಠದ ಸ್ವಾಮೀಜಿ ಶ್ರೀ ಶ್ರೀ ವೀರಭದ್ರ ಮಹಾಸ್ವಾಮಿಗಳು ಬಿಡುಗಡೆ ಮಾಡಿದರು . ಸಮಾರಂಭದ ವೇದಿಕೆಯಲ್ಲಿ ನಂದವಾಡಗಿಯ ಶ್ರೀ ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು , ಬೇಡರ ಕಾರಲಕುಂಟಿಯ ಶ್ರೀ ಕಾಲಜ್ಞಾನ ಮಠದ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು , ರಾಜಕೀಯ ಮುಖಂಡರಾದ ಹೊನ್ನಪ್ಪ ಮೇಟಿ , ಜನನಿ ಸಾಹಿತ್ಯ ವೇದಿಕೆಯ ಅಧ್ಯಕ್ಷ ಶ್ರೀ ವಿಜಯ್ ದಾಸ್ ನವಲಿ , ಸಂಘಟಕ ನಿರುಪಾದಿ ಕವಿ , ಯುವ ಕವಿ ಮತ್ತು ಶಿಕ್ಷಕ ನಿಜಲಿಂಗಯ್ಯ ಹಾಲದೇವರಮಠ , ಅಂಬರೀಷ್ ಚಲವಾದಿ , ರಾಜಕೀಯ ನಾಯಕ ಈಶ್ವರ್ ವಜ್ಜಲ್ , ರಮೇಶ್ ಗುತ್ತೇದಾರ್ , ಬಾಲನಗೌಡ ನಾಗರಹಾಳ , ನಾಗರಹಾಳ ಗ್ರಾಮದ ಅನೇಕ ಗಣ್ಯರು ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು .