ಕುಕ್ಕೆಶ್ರೀ ಸುಬ್ರಹ್ಮಣ್ಯದಲ್ಲಿ ಸಂಭ್ರಮದ ಲಕ್ಷದೀಪೋತ್ಸವ, ಮೆರುಗು ಹೆಚ್ಚಿಸಿದ ಕುಣಿತ ಭಜನೆ

0
2


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಮಹೋತ್ಸದ ಲಕ್ಷದೀಪೋತ್ಸವ ನ.23 ರಂದು ನಡೆಯಿತು. ಈ ಭಾರಿ ವಿಶೇಷವಾಗಿ ಕುಣಿತ ಭಜನೋತ್ಸವ ನೆರವೇರಿತು. ಶ್ರೀ ದೇವರ ರಥೋತ್ಸವದ ಮೊದಲು ಶ್ರೀ ದೇವಳದ ರಾಜಗೋಪುರದ ಬಳಿಯಿಂದ ರಥಬೀದಿ, ಅಡ್ಡಬೀದಿ, ಕಾಶಿಕಟ್ಟೆ ವರೆಗೆ ಕುಣಿತ ಭಜನೆ ನೆರವೇರಿತು. ೧೭೫ಕ್ಕೂ ಅಧಿಕ ತಂಡಗಳಿಂದ ಸುಮಾರು ೧೭೫೦ ಮಂದಿ ಕುಣಿತ ಭಜನೆಯ ಮೂಲಕ ಭಗವಂತನ ನಾಮ ಸ್ಮರಣಾ ಸೇವೆಯನ್ನು ಸಮರ್ಪಿಸಿದರು.


ಖ್ಯಾತ ಗಾಯಕ ಜಗದೀಶ ಆಚಾರ್ಯ ಪುತ್ತೂರು ಅವರ ಹಾಡಿಗೆ ತಂಡಗಳು ಹೆಜ್ಜೆ ಹಾಕಿದವು. ವಿದ್ಯಾರ್ಥಿಗಳು, ಊರವರು, ಭಕ್ತರು, ಸಂಘ ಸಂಸ್ಥೆಗಳು, ಭಕ್ತರು ಕುಣಿತ ಭಜನೋತ್ಸವದಲ್ಲಿ ಭಾಗವಹಿಸಿದ್ದರು.ಪ್ರತಿ ತಂಡದಲ್ಲಿ ೧೦ ಮಂದಿ ಸದಸ್ಯರಿದ್ದರು.ಅಲ್ಲದೆ ಪ್ರತಿ ತಂಡಕ್ಕೂ ಪ್ರತ್ಯೇಕ ಸ್ಥಳ ನಿಯೋಜನೆ ಮಾಡಲಾಗಿತ್ತು.

ರಥಬೀದಿ, ಅಡ್ಡಬೀದಿ, ಕಾಶಿಕಟ್ಟೆವರೆಗಿನ ರಸ್ತೆಯಲ್ಲಿ 1೦ ಮಂದಿ ಸದಸ್ಯರನ್ನೊಳಗೊಂಡ ಭಜನಾ ತಂಡಗಳು ಸೇವೆ ನೆರವೇರಿಸಿದವು.ಕುಣಿತ ಭಜನೋತ್ಸವವನ್ನು ಸಾಮಾಜಿಕ ಕಾರ್ಯಕರ್ತ ಕರ್ನಾಟಕ ದೇವಾಲಯಗಳ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರ್ ಮಠದ್ ಉದ್ಘಾಟಿಸಿದರು.ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಕುಣಿತ ಭಜನೆ ಬಳಿಕ ರಥೋತ್ಸವ ನಡೆಯಿತು.

LEAVE A REPLY

Please enter your comment!
Please enter your name here