ಐವರ್ನಾಡು : ಎಟಿಎಂ‌ ಸೆಂಟರ್ ನಲ್ಲಿ ಎಲೆಕ್ಟ್ರಿಕಲ್ ಸ್ಕೂಟರ್ ಗೆ ‌ಬ್ಯಾಟರಿ ಚಾರ್ಜ್, ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಬ್ಯಾಂಕ್ ನಿಂದ ಅನುಮತಿ ಪಡೆದು ಚಾರ್ಜ್ ಮಾಡಿದ್ದೇನೆ – ಅಧಿಕಾರಿ ಸ್ಪಷ್ಟನೆ

0

ಐವರ್ನಾಡು ಗ್ರಾಮದ ಎಸ್ ಬಿ ಐ ಬ್ಯಾಂಕಿನ ಅಧಿಕಾರಿಯೋರ್ವರು ತಮ್ಮದೇ ಬ್ಯಾಂಕಿನ ಎಟಿಎಂ ಗೆ ಅಳವಡಿಸಿರುವ ವಿದ್ಯುತ್ ಪಾಯಿಂಟ್ ನಿಂದ ತಮ್ಮ ಎಲೆಕ್ಟ್ರಿಕ್ ವಾಹನಕ್ಕೆ ಕರೆಂಟ್ ಚಾರ್ಜ್ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವಾಹನಕ್ಕೆ ಚಾರ್ಜ್ ಮಾಡಿ ಕೊಳ್ಳುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಬ್ಯಾಂಕ್ ನ ಕ್ಯಾಷಿಯರ್ ಆಗಿರುವ ಜಯರಾಮ ಎಂಬುವವರು ಒಂದು ಎಲೆಕ್ಟ್ರಿಕ್ ಸ್ಕೂಟರ್ ಹೊಂದಿದ್ದು, ಅದನ್ನು ದಿನಂಪ್ರತಿ ಚಾರ್ಜ್ ಮಾಡಲು ಎಟಿಎಂ ನಲ್ಲಿರುವ ಪ್ಲಗ್ ಪಾಯಿಂಟ್ ಅನ್ನೇ ಚಾರ್ಜಿಂಗ್ ಪಾಯಿಂಟ್ ಆಗಿ ಬಳಕೆ ಮಾಡುತ್ತಿದ್ದು ಸ್ಥಳೀಯರು ಘಟನೆಯನ್ನು ವಿಡಿಯೋ ಮೂಲಕ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
ಈ ಬಗ್ಗೆ ಬ್ಯಾಂಕ್ ಕ್ಯಾಷಿಯರ್ ಜಯರಾಮರವರಲ್ಲಿ ವಿಚಾರಿಸಿದಾಗ ನಾನು ಬ್ಯಾಂಕ್ ನಿಂದ ಅನುಮತಿ ಪಡೆದು ಸರಕಾರದ ಪಾಲಿಸಿ ಪ್ರಕಾರವೇ ಸ್ಕೂಟರಿಗೆ ಚಾರ್ಜ್ ಮಾಡುತ್ತಿರುವುದು ಎಂದು ತಿಳಿಸಿದ್ದಾರೆ.