ಎಣ್ಮೂರು – ನಿಂತಿಕಲ್ಲು ತೀಯಾ ಸಮಾಜದ ಮಹಾಸಭೆ

0

ಎಣ್ಮೂರು-ನಿಂತಿಕಲ್ಲು ತೀಯಾ ಸಮಾಜ ಸೇವಾ ಸಮಿತಿ ಇದರ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ನ. 20 ರಂದು ಎಣ್ಮೂರು ಶ್ರೀ ಸೀತಾರಾಮಾಂಜನೇಯ ಭಾರತೀ ಮಂದಿರದಲ್ಲಿ ಸಮಿತಿಯ ಅಧ್ಯಕ್ಷ ಲೋಕೇಶ್ ಬೆಳ್ಳಿಗೆವರ ಅಧ್ಯಕ್ಷತೆಯಲ್ಲಿ ನಡೆಯಿತು. ದಾಮೋದರ ಪಿ.ಬಿ. ಸುಬ್ರಹ್ಮಣ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ವಾರ್ಷಿಕ ಸಾಲಿನ ವರದಿಯನ್ನು ಸಮಿತಿಯ ಕಾರ್‍ಯದರ್ಶಿ ರವಿವರ್ಮ ವಾಚಿಸಿದರು. ಲೆಕ್ಕ ಪತ್ರವನ್ನು ಕೋಶಾಧಿಕಾರಿ ಚಂದ್ರಶೇಖರ ಕಲ್ಲೇರಿ ಮಂಡಿಸಿದರು. 2021-22ನೇ ಸಾಲಿನ ಎಸ್ ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಮಿತಿಯ ಗೌರವಾಧ್ಯಕ್ಷರಾದ ಶಶಿಧರ ಬೆಳ್ಳಾರೆರವರನ್ನು ಸನ್ಮಾನಿಸಲಾಯಿತು. ತದನಂತರ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಗೌರವಾಧ್ಯಕ್ಷರಾಗಿ ಕೊರಗಪ್ಪ ಕಲ್ಲೇರಿ, ಅಪ್ಪಕುಂಞ್ಞ ಪಾಜಪಳ್ಳ, ಅಧ್ಯಕ್ಷರಾಗಿ ಚಂದ್ರಶೇಖರ ಕಲ್ಲೇರಿ, ಉಪಾಧ್ಯಕ್ಷರಾಗಿ ಸುಂದರ ಪಾಜಪಳ್ಳ, ಕಾರ್‍ಯದರ್ಶಿಯಾಗಿ ಸುಹಾಸ್ ಅಲೆಕ್ಕಾಡಿ, ಜೊತೆ ಕಾರ್‍ಯದರ್ಶಿಯಾಗಿ ರಕ್ಷಿತ್ ಮಂಚಿಕಟ್ಟೆ, ಕೋಶಾಧಿಕಾರಿಯಾಗಿ ರಮ್ಯ ಪಾಜಪಳ್ಳ, ಸಂಘಟನಾ ಕಾರ್ಯದರ್ಶಿಯಾಗಿ ಮನು ಪಂಜರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮಹಿಳಾ ಸಮಿತಿಯನ್ನು ರಚಿಸಲಾಯಿತು. ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಪ್ರೇಮಲತಾ, ಉಪಾಧ್ಯಕ್ಷರಾಗಿ ಸುವರ್ಣಚಂದ್ರಿಕಾ, ಕಾರ್ಯದರ್ಶಿಯಾಗಿ ದಿವ್ಯ ಸಿ.ಎಸ್ ಹಾಗೂ ಕೋಶಾಧಿಕಾರಿಯಾಗಿ ಪುಷ್ಪಲತಾ ಎಣ್ಮೂರು ರವರನ್ನು ಆಯ್ಕೆ ಮಾಡಲಾಯಿತು. ಸಭೆಯ ನಿರ್ಣಯದಂತೆ ಈ ಹಿಂದಿನ ಸಾಲಿನ ಪದಾಧಿಕಾರಿಗಳನ್ನು ಸಮಿತಿಯ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು. ಬಳಿಕ ಪ್ರಧಾನ ಸಮಿತಿ ಪುತ್ತೂರು ತೀಯಾ ಸಮಾಜ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ನಾರಾಯಣ ಸಾಲ್ಮರ ಹಾಗೂ ಮಲ್ಲಿಕಾ, ಪ್ರಧಾನ ಸಮಿತಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಪಿ.ವಿರವರು ಶುಭ ಹಾರೈಸಿದರು. ಸಮಿತಿಯ ಅಧ್ಯಕ್ಷರಾದ ಲೋಕೇಶ್ ಬೆಳ್ಳಿಗೆಯವರು ಅಧ್ಯಕ್ಷೀಯ ಮಾತನಾಡಿದರು.

ಸುವರ್ಣಚಂದ್ರಿಕಾರವರು ಸ್ವಾಗತಿಸಿ, ರಮ್ಯ ಪಾಜಪಳ್ಳರವರು ವಂದಿಸಿದರು. ಸುಹಾಸ್ ಅಲೆಕ್ಕಾಡಿರವರು ಕಾರ್ಯಕ್ರಮ ನಿರೂಪಿಸಿದರು.