ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೆ ಧರ್ಮಪಾಲ ಕೊಯಿಂಗಾಜೆ ರಾಜಿನಾಮೆ

0

ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೆ ಧರ್ಮಪಾಲ ಕೊಯಿಂಗಾಜೆ ರಾಜಿನಾಮೆ‌ ನೀಡಿದ್ದಾರೆ. ಕಾಂಗ್ರೆಸ್ ಮುಖಂಡ ಸೋಮಶೇಖರ ಕೊಯಿಂಗಾಜೆ ಅವರು ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ಅವರು ರಾಜೀನಾಮೆ ನೀಡಿರುವ ವಿಷಯ ತುಂಬಾ ನೋವನ್ನುಟು ಮಾಡಿದೆ. ಅವರಿಗೆ ಬೆಂಬಲ ಸೂಚಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುತ್ತಿದ್ದೇನೆ ಎಂದು ಆಲೆಟ್ಟಿ ಗ್ರಾ.ಪಂ.ಸದಸ್ಯರಾಗಿರುವ ಧರ್ಮಪಾಲ ಕೊಯಿಂಗಾಜೆ ತಿಳಿಸಿದ್ದಾರೆ.