ಗುತ್ತಿಗಾರು ವಲಯದ ಗ್ರಾಮ ಪಂಚಾಯತ್ ಮಟ್ಟದ ಕ್ರೀಡಾಕೂಟ, ಗುತ್ತಿಗಾರು, ನೆಲ್ಲೂರು ಕೆಮ್ರಾಜೆ, ದೇವಚಳ್ಳ, ಮಡಪ್ಪಾಡಿ, ಹರಿಹರಕ್ಕೆ ಬಹುಮಾನ

0

ಗುತ್ತಿಗಾರು ವಲಯದ ಗ್ರಾಮ ಪಂಚಾಯತ್ ಮಟ್ಟದ ಗ್ರಾಮೀಣ ಕ್ರೀಡಾಕೂಟ ಗುತ್ತಿಗಾರು ಪ್ರೌಢಶಾಲಾ ಮೈದಾನದಲ್ಲಿ ನ.24 ರಂದು ನಡೆಯಿತು. ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿಯವರು ಕ್ರೀಡಾಕೂಟ ಉದ್ಘಾಟಿಸಿದರು .ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಪಂಚಾಯತಿನ ಕಾರ್ಯನಿರ್ವಾಹಕ ಅಧಿಕಾರಿಯವರಾದ ಭವಾನಿಶಂಕರ ಎನ್, ಕ್ರೀಡಾಕೂಟದ ನೋಡಲ್ ಅಧಿಕಾರಿ ದೇವರಾಜ್ ಮುತ್ಲಾಜೆ, ಗುತ್ತಿಗಾರು, ಮಡಪ್ಪಾಡಿ,ಕೊಲ್ಲಮೊಗ್ರು,ದೇವಚಳ್ಳ,ಹರಿಹರ ಪಲ್ಲತಡ್ಕ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು, ದೈಹಿಕ ಶಿಕ್ಷಕ ಶಿಕ್ಷಣಾಧಿಕಾರಿಯವರು,ಶಾಲಾ ಮುಖ್ಯೋಪಾಧ್ಯಾಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಂಚಾಯತ್ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಉಪಸ್ಥಿತರಿದ್ದರು.

ಫಲಿತಾಂಶ: ಕಬಡ್ಡಿ ಪಂದ್ಯಾಟದಲ್ಲಿ ಪುರುಷರ ವಿಭಾಗದಲ್ಲಿ ಗುತ್ತಿಗಾರು ಪ್ರಥಮ ಸ್ಥಾನ, ಹರಿಹರ ಪಲ್ಲತಡ್ಕ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ದೇವಚಳ್ಳ ಪ್ರಥಮ, ನೆಲ್ಲೂರು ಕೆಮ್ರಾಜೆ ತಂಡ ದ್ವಿತೀಯ ಸ್ಥಾನ ಪಡೆಯಿತು.
. ಖೋ ಖೋ ಪಂದ್ಯದಲ್ಲಿ ಪುರುಷರ ವಿಭಾಗದಲ್ಲಿ ಮಡಪ್ಪಾಡಿ ಪ್ರಥಮ ಹಾಗೂ ನೆಲ್ಲೂರು ಕೆಮ್ರಾಜೆ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ನೆಲ್ಲೂರು ಕೆಮ್ರಾಜೆ ಪ್ರಥಮ ಹಾಗೂ ಗುತ್ತಿಗಾರು ದ್ವಿತೀಯ ಸ್ಥಾನ ಪಡೆಯಿತು
.