ಸಂಪಾಜೆಯಲ್ಲಿ ರಾಜೀನಾಮೆ ಸರಣಿ ಆರಂಭ, ಮತ್ತೆ ಮೂರು ಮಂದಿಯಿಂದ ಪಂಚಾಯತ್ ಸದಸ್ಯತ್ವಕ್ಕೆ ರಾಜೀನಾಮೆ

0


ಸಂಪಾಜೆ ಗ್ರಾ.ಪಂ. ಸದಸ್ಯತ್ವಕ್ಕೆ ಸೋಮಶೇಖರ ಕೊಯಿಂಗಾಜೆ ರಾಜೀನಾಮೆ ನೀಡಿದ ಬೆನ್ನ ಹಿಂದೆಯೇ ಮತ್ತೆ ಮೂವರು ಸದಸ್ಯರು ರಾಜೀನಾಮೆ ನೀಡಿದ್ದಾರೆ.
ಪಂಚಾಯತ್ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ಸದಸ್ಯರಾದ ವಿಮಲಾ ಪ್ರಸಾದ್ ಹಾಗೂ ಶೌವಾದ್ ಗೂನಡ್ಕ ಇಂದು ಗ್ರಾ.ಪಂ. ಅಧ್ಯಕ್ಷರಿಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿದರೆಂದು ತಿಳಿದು ಬಂದಿದೆ.