ಡಿ.11: ಧರ್ಮಾರಣ್ಯದಲ್ಲಿ ಗೋಪಾಲಕೃಷ್ಣ ಭಟ್ ಸಾರ್ವಜನಿಕ ಅಭಿನಂದನೆ ಮತ್ತು ಸನ್ಮಾನ ಸಮಾರಂಭ

0

ಸುಳ್ಯ ಗೋಪಾಲಕೃಷ್ಣ ಭಟ್ ಸಾರ್ವಜನಿಕ ಅಭಿನಂದನಾ ಸಮಿತಿಯ ಆಶ್ರಯದಲ್ಲಿ ಅರಂಬೂರಿನ ಸರಳಿಕುಂಜ ಧರ್ಮಾರಣ್ಯ ಗುರುಗಣಪತಿ ಸಭಾಭವನದಲ್ಲಿ ಶ್ರೀ ಗೋಪಾಲಕೃಷ್ಣ ಭಟ್ ರವರ ಅಭಿನಂದನಾ ಮತ್ತು ಸನ್ಮಾನ ಸಮಾರಂಭವು ಸಾರ್ವಜನಿಕವಾಗಿ ಡಿ.11 ರಂದುನಡೆಯಲಿರುವುದು.
ಬೆಳಗ್ಗೆ ಗಂಟೆ 9.00 ರಿಂದ ಸುಳ್ಯದ ಜ್ಯೋತಿ ವೃತ್ತದ ಬಳಿಯಿಂದ ಸನ್ಮಾನಿತರನ್ನು ವಾಹನ ಜಾಥಾದೊಂದಿಗೆ ಮೆರವಣಿಗೆಯ ಮೂಲಕ ಧರ್ಮಾರಣ್ಯಕ್ಕೆ ಕರೆ ತರಲಾಗುವುದು.
ಬಳಿಕ‌ ಸಮಾರಂಭವು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಸುಳ್ಯ ಪೋಲಿಸ್ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಯವರು ಭಾಗವಹಿಸಲಿದ್ದಾರೆ. ಬೆಳ್ತಂಗಡಿಯ ಬೆಳಾಲು ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೂಂತಾರು ರವರು ಅಭಿನಂದನಾ ಭಾಷಣ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಅಭಿನಂದನಾ ಗ್ರಂಥ “ಅಂತರಿಕ್ಷ” ವನ್ನು ಹಿರಿಯ ಉದ್ಯಮಿ ಕೃಷ್ಣ ಕಾಮತ್ ಸರಳಿಕುಂಜ ರವರು ಬಿಡುಗಡೆಮಾಡಲಿರುವರು. ಮುಖ್ಯ ಅಭ್ಯಾಗತರಾಗಿ ಸಾರ್ವಜನಿಕ ಗೋಪಾಲಕೃಷ್ಣ ಭಟ್ ಅಭಿನಂದನಾ ಸಮಿತಿ ಅಧ್ಯಕ್ಷ ಅಶೋಕ ಪ್ರಭು ಸುಳ್ಯ, ಸುಳ್ಯ ಬಿ.ಎಂ.ಎಸ್.ಅಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕಉಪಸ್ಥಿತರಿರುವರು.
ಅಪರಾಹ್ನ ಗಂಟೆ 2.30 ರಿಂದ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಯಕ್ಷ ಸಂವಾದ ಭೀಮ -ದ್ರೌಪದಿ, ಕೃಷ್ಣ-ಕೌರವ ಪ್ರಸಂಗದ ಪ್ರದರ್ಶನ ವಾಗಲಿರುವುದು. ಆಗಮಿಸಿದ ಎಲ್ಲರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗುವುದು. ಕಾರ್ಯಕ್ರಮದ ನೇತೃತ್ವವನ್ನು
ಸುಳ್ಯಬಿ.ಎಂ.ಎಸ್.ಅಟೋ ರಿಕ್ಷಾ ಚಾಲಕರ ಸಂಘ, ಸುಳ್ಯ ಹವ್ಯಕ ವಲಯ, ಧರ್ಮಾರಣ್ಯ ಅಭಿವೃದ್ಧಿ ಸಮಿತಿಸರಳಿಕುಂಜ, ಗುರುಗಣಪತಿ ಭಕ್ತ ಭಜನಾ ಮಂಡಳಿ ಸರಳಿಕುಂಜ, ದೀಪಾಂಜಲಿ ಮಹಿಳಾ ಭಜನಾ ಮಂಡಳಿ ಶಾಂತಿನಗರ, ಪೂಮಲೆ ಕ್ರೀಡಾ ಮತ್ತು ಕಲಾ ಸಂಘ ಸರಳಿಕುಂಜ ವಹಿಸಿಕೊಳ್ಳಲಿದೆ ಎಂದು ಅಭಿನಂದನಾ ಸಮಿತಿಯ ಅಧ್ಯಕ್ಷ ಅಶೋಕ ಪ್ರಭು ರವರು ತಿಳಿಸಿದ್ದಾರೆ.