ಡಿ.3: ಅರಂಬೂರಿನಲ್ಲಿ 13 ನೇ ವರ್ಷದ ಅಯ್ಯಪ್ಪ ಸ್ವಾಮಿಯ ದೀಪೋತ್ಸವ- ನೃತ್ಯ ಭಜನೆ, ಅಪ್ಪ ಸೇವೆ, ಅಗ್ನಿ ಸೇವೆ

0

ಅರಂಬೂರು ಸಾರ್ವಜನಿಕ ಶ್ರೀ ಅಯ್ಯಪ್ಪ ಸೇವಾ ಸಮಿತಿ ಮತ್ತು ಶ್ರೀ ಅಯ್ಯಪ್ಪ ದೀಪೋತ್ಸವ ಸಮಿತಿಯ ಆಶ್ರಯದಲ್ಲಿ 13 ನೇ ವರ್ಷದ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೀಪೋತ್ಸವವು ಡಿ.3 ರಂದು ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದ ವಠಾರದಲ್ಲಿ‌ ಡಿ.ನಾರಾಯಣ ಗುರುಸ್ವಾಮಿ ದೊಡ್ಡೇರಿ ಮತ್ತು ಯಂ.ಈಶ್ವರ ಗುರುಸ್ವಾಮಿ ಮಜಿಗುಂಡಿ ಯವರ ನೇತೃತ್ವದಲ್ಲಿ ನಡೆಯಲಿರುವುದು.
ಬೆಳಗ್ಗೆ ಗಣಪತಿ ಹವನವಾಗಿ ಉಷಾ ಪೂಜೆಯು ನಡೆಯಲಿದೆ. ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಗಲಿರುವುದು. ಸಂಜೆ ಗಂಟೆ 6.30 ರಿಂದ ಗಣೇಶ್ ಸ್ಟೀಲ್ ಇಂಡಸ್ಟ್ರೀಸ್ ಬಳಿಯಿಂದ ಮೂಕಾಂಬಿಕಾ ಭಜನಾ ಮಂದಿರದ ತನಕ ಚೆಂಡೆ ವಾದ್ಯ ಘೋಷಗಳೊಂದಿಗೆ ಬಾಲಕ ಬಾಲಕಿಯರ ದೀಪಾರಾಧನೆಯ ಬೆಳಕಿನೊಂದಿಗೆ ಸಿಡಿ ಮದ್ದಿನ ಪ್ರದರ್ಶನ ದೊಂದಿಗೆ ಅಯ್ಯಪ್ಪ ವೃತಧಾರಿಗಳ ಸಮ್ಮುಖದಲ್ಲಿ ಪಾಲ್ ಕೊಂಬು ಮೆರವಣಿಗೆಯು ಸಾಗಿ ಬರಲಿದೆ.
ರಾತ್ರಿ ಗಂಟೆ 8.00 ರಿಂದ ಆಕರ್ಷಕ ನೃತ್ಯ ಭಜನೆಯು ನಡೆಯಲಿದ್ದು ಬಳಿಕಮಹಾಮಂಗಳಾರತಿಯಾಗಿ ಪ್ರಸಾದ ವಿತರಣೆಯಾಗಲಿದೆ. ಆಗಮಿಸಿದ ಎಲ್ಲರಿಗೂ ರಾತ್ರಿ ಅನ್ನ ಸಂತರ್ಪಣೆ ನೆರವೇರಲಿದೆ.ರಾತ್ರಿ ಅಗ್ನಿ ಸ್ಪರ್ಶವಾಗಿ ಅಯ್ಯಪ್ಪ ವೃತಧಾರಿಗಳಿಂದ ವಿಶೇಷವಾಗಿ ಅಪ್ಪ ಸೇವೆಯು ನಡೆಯಲಿದೆ. ಮರುದಿನ ಪ್ರಾತ:ಕಾಲ ಅಗ್ನಿ ಸೇವೆಯಾಗಿ ಮಂಗಳಾರತಿಯೊಂದಿಗೆ ದೀಪ ವಿಸರ್ಜನೆಯಾಗಲಿರುವುದು. ರಾತ್ರಿ ದೇಂತಡ್ಕ ಶ್ರೀ ವನದುರ್ಗಾ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರಿಂದ ಸಿರಿ ಚಂದನ ತುಳು ಯಕ್ಷಗಾನ ಬಯಲಾಟ ಪ್ರದರ್ಶನವಾಗಲಿರುವುದು ಎಂದು ಸಂಘಟಕರು ತಿಳಿಸಿದ್ದಾರೆ.