ನ.28 ರಂದು ಸುಳ್ಯದಲ್ಲಿ ಜನತಾದಳ (ಜಾ) ಪಕ್ಷದ ನೂತನ ಕಚೇರಿಯ ಉದ್ಘಾಟನೆ

0

ಸುಳ್ಯ ತಾಲೂಕು ಜನತಾದಳ (ಜಾ) ಪಕ್ಷದ ನೂತನ ಕಚೇರಿಯು ನ.28 ರಂದು ಉದ್ಘಾಟನೆಗೊಳ್ಳಲಿದೆ. ಕರ್ನಾಟಕ ಪ್ರದೇಶ ಜನತಾದಳ ರಾಜ್ಯ ವಕ್ತಾರ ಎಂ.ಬಿ.ಸದಾಶಿವ ಕಾರ್ಯಾಲಯವನ್ನು ಉದ್ಘಾಟಿಸಲಿದ್ದಾರೆ. ದ.ಕ ಜಿಲ್ಲೆಯ ಪಕ್ಷದ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ದೀಪ ಪ್ರಜ್ವಲಿಸಲಿದ್ದಾರೆ. ಪಕ್ಷದ ಹಿರಿಯ ಧುರೀಣರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ರಥಬೀದಿಯಲ್ಲಿರುವ ಕಟ್ಟೆಕ್ಕಾರ್ ಕಟ್ಟಡದಲ್ಲಿ ಕಾರ್ಯಾಲಯದ ಕಚೇರಿಯು ಕಾರ್ಯ ನಿರ್ವಹಿಸಲಿದೆ. ಸಭಾ ಕಾರ್ಯಕ್ರಮ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಯಲಿರುವುದಾಗಿ ಪಕ್ಷದ ವಕ್ತಾರ ರಾಕೇಶ್ ಕುಂಟಿಕಾನ ರವರು ತಿಳಿಸಿದ್ದಾರೆ.