ಯೇನೆಕಲ್ಲು : ಬಾನಡ್ಕ – ಬೋಲಡ್ಕ ಸೈನಿಕ ರಸ್ತೆ ಅಭಿವೃದ್ಧಿಗೆ ಸಚಿವ ಎಸ್. ಅಂಗಾರರಿಂದ ಗುದ್ದಲಿ ಪೂಜೆ

0

ಇತ್ತೀಚೆಗೆ ಸೈನಿಕ ರಸ್ತೆಯಾಗಿ ನಾಮಕರಣಗೊಂಡ ಯೇನೆಕಲ್ಲು ಗ್ರಾಮದ ಬಾನಡ್ಕ – ಬೋಲಡ್ಕ ರಸ್ತೆ ಅಭಿವೃದ್ಧಿ ರೂ. 35 ಲಕ್ಷ ವೆಚ್ಚದಲ್ಲಿ ನಡೆಯಲಿದ್ದು, ಸಚಿವ ಎಸ್. ಅಂಗಾರ ನ. 25ರಂದು ಗುದ್ದಲಿ ಪೂಜೆ ನೆರವೇರಿಸಿದರು.
ಸುಬ್ರಹ್ಮಣ್ಯ ಗ್ರಾ.ಪಂ. ಅಧ್ಯಕ್ಷೆ ಲಲಿತಾ ಗುಂಡಡ್ಕ,
ಸುಳ್ಯ ಬಿಜೆಪಿ ಮಂಡಲ ಉಪಾಧ್ಯಕ್ಷರಾದ ವಾಡ್ಯಪ್ಪ ಗೌಡ ಎರ್ಮಾಯಿಲ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶಿವಪ್ರಸಾದ್ ನಡುತೋಟ, ಕಾರ್ಯದರ್ಶಿ ಮಧುಸೂದನ್, ಏನೆಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಭವಾನಿಶಂಕರ್ ಪೂಂಬಾಡಿ, ಸುಬೇದಾರ್ ವಾಸುದೇವ ಬಾನಡ್ಕ, ಪ್ರಮುಖರಾದ ಗಿರಿಯಪ್ಪ ಗೌಡ ಬಾಲಾಡಿ, ಸೇರಿದಂತೆ ಪ್ರಮುಖ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಚಕ್ರ ಎಸೆತ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಏನೆಕಲ್ ಗ್ರಾಮದ ಪದ್ನಡ್ಕ ನಿವಾಸಿ ಗಗನ್ ಎ ರವರನ್ನು ಸಚಿವರು ಗೌರವಿಸಿದರು.