ಅರಂತೋಡು ಜಮಾಅತ್ ವತಿಯಿಂದ ಗಲ್ಫ್ ಸಹೋದರರಿಗೆ ಸನ್ಮಾನ

0

ದುಬೈಯಲ್ಲಿ ಉಧ್ಯೋಗದಲ್ಲಿರುವ ಅರಂತೋಡು ಜಮಾ ಅತ್ ದುಬೈ ಸಮಿತಿಯ ಸದಸ್ಯರಾದ ಸರ್ಫ್ರಾಜ್ ಪಠೇಲ್ ರವರಿಗೆ ಅರಂತೋಡು ಜಮಾ ಅತ್ ನ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದರು. ಖತೀಬರಾದ ಅಲ್ ಹಾಜ್ ಇಸಾಕ್ ಬಾಖವಿಯವರು ಸನ್ಮಾನಿಸಿದರು.

ಮುಖ್ಯ ಅಥಿತಿ ಯಾಗಿ ಯುವ ಉದ್ಯಮಿ ಸೈಫುದ್ಧೀನ್ ಪಠೇಲ್ ಆಗಮಿಸಿದ್ದರು, ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ಮಾಜಿ ಅಧ್ಯಕ್ಷರಾದ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಅಬ್ದುಲ್ ಖಾದರ್ ಪಠೇಲ್, ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಮಜೀದ್, ಜತೆಕಾರ್ಯದರ್ಶಿಗಳಾದ ಎ.ಹನೀಫ್, ಅಮೀರ್ ಕುಕ್ಕುಂಬಳ, ನಿವ್ರತ್ತ ಉಪನ್ಯಾಸಕ ಎ. ಅಬ್ದುಲ್ಲ ಮಾಸ್ಟರ್ ಬೆಂಗಳೂರು ಪ್ರತಿನಿಧಿಗಳಾದ ಸಂಶುದ್ಧೀನ್ ಕ್ಯೂರ್, ವಹಾಬ್ ಅಡಿಮರಡ್ಕ, ಸಾಮಾಜಿಕ ಕಾರ್ಯಕರ್ತ ತಾಜುದ್ಧೀನ್ ಅರಂತೋಡು ಅಬ್ದುಲ್ ರಹಿಮಾನ್ ಪಠೇಲ್, ಬಾತಿಶ ಹಮೀದ್ ಮೊದಲಾದವರು ಉಪಸ್ಥಿತರಿದ್ದರು. ಜಮಾ ಅತ್ ಕಾರ್ಯದರ್ಶಿ ಕೆ.ಎಂ ಮೂಸಾನ್ ಸ್ವಾಗತಿಸಿ ವಂದಿಸಿದರು.