ರಾಮಕೃಷ್ಣ ಕೆ.ಕೆ. ಸುಳ್ಯರವರಿಗೆ “ಚೈತನ್ಯ ರತ್ನ” ಪ್ರಶಸ್ತಿ

0


ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ತುರೇಬೈಲುನ ಮದರ್ ಡೀಮ್ಸ್ ರೂರಲ್ & ಅರ್ಬನ್ ಎಜುಕೇಷನ್ ಡೆವೆಲಪ್‌ಮೆಂಟ್ ಸೊಸೈಟಿ ವತಿಯಿಂದ ರಾಜ್ಯ ಮಟ್ಟದ ಗ್ರಾಮೀಣ ಮಕ್ಕಳ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನದಲ್ಲಿ ರಾಮಕೃಷ್ಣ ಕೆ.ಕೆ. ಸುಳ್ಯರವರಿಗೆ “ಚೈತನ್ಯ ರತ್ನ” ಪ್ರಶಸ್ತಿ ನಿಡಿ ಗೌರವಿಸಲಾಯಿತು.

ಕಳೆದ ೨೬ ವರ್ಷಗಳಿಂದ ಗೃಹರಕ್ಷಕ ದಳ ಅಧಿಕಾರಿಯಾಗಿ ಹಾಗೂ ನಾಟಕ, ಯಕ್ಷಗಾನ, ಜಾನಪದ ನೃತ್ಯ, ಕೋಲಾಟ, ಯೋಗ, ಸಾಹಿತ್ಯ ಮತ್ತು ಅಂಚೆ ಚೀಟಿ ಸಂಗ್ರಹ ಈ ಸೇವೆಯನ್ನು ಗುರುತಿಸಿ “ಚೈತನ್ಯ ರತ್ನ” ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು. ಇವರು ಸುಳ್ಯ ಜೂನಿಯರ್ ಕಾಲೇಜು ಬಳಿಯ ನಿವಾಸಿ.