ಸುಳ್ಯದ ಇತಿಹಾಸದಲ್ಲಿ ಎರಡನೇ ಬಾರಿಗೆ ನಡೆಯುತ್ತಿರುವ ಬೃಹತ್ ಉದ್ಯೋಗ ಮೇಳ, ಸುಮಾರು ಮೂರು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗಿ, ಪ್ರೀಡಂ ಆ್ಯಪ್ ಸೇರಿದಂತೆ ರಾಜ್ಯದ 73 ವಿವಿಧ ಕಂಪನಿಗಳು ಉಪಸ್ಥಿತಿ, ಉದ್ಯೋಗ ಮೇಳದಲ್ಲಿ ಯಾವೆಲ್ಲಾ ಕಂಪೆನಿಗಳಿವೆ

0

ಸುಳ್ಯದ ಶಾಸಕರು, ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರ ಸಹಭಾಗಿತ್ವದಲ್ಲಿ ಮಂಗಳೂರಿನ ಕೆರಿಯರ್ ಡೆಸ್ಟಿನಿ ಹಾಗೂ ಕೆ.ಎಸ್. ಡಿ.ಸಿ., ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ಸುಳ್ಯದ ಇತಿಹಾಸದಲ್ಲಿ ಎರಡನೇ ಬಾರಿಗೆ ಬೃಹತ್ ಉದ್ಯೋಗ ಮೇಳವು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಜರುಗುತ್ತಿದ್ದು, ಸುಮಾರು ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದು, ಬೆಂಗಳೂರಿನ ಪ್ರೀಡಂ ಆ್ಯಪ್ ಸೇರಿದಂತೆ ಇದುವರೆಗೆ ಸುಮಾರು 73 ವಿವಿಧ ಕಂಪೆನಿಗಳು ಭಾಗವಹಿಸಿವೆ.

ಉದ್ಯೋಗ ಮೇಳದಲ್ಲಿ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳುತ್ತಿದ್ದು, ನೆಹರೂ ಮೆಮೋರಿಯಲ್ ಕಾಲೇಜಿನ ಒಟ್ಟು 28 ಕೊಠಡಿಗಳಲ್ಲಿ ವಿವಿಧ ಕಂಪೆನಿಗಳು ವಿದ್ಯಾರ್ಥಿಗಳ ಸಂದರ್ಶನ ನಡೆಸುತ್ತಿದ್ದಾರೆ.
ಮಂಗಳೂರಿನ ಕೆರಿಯರ್ ಡೆಸ್ಟಿನಿ ಮತ್ತು ಕೆ.ಎಸ್.ಡಿ.ಸಿ. ಕೆವಿಜಿ ಸಮೂಹ ವಿದ್ಯಾಸಂಸ್ಥೆಗಳ ಸಹಕಾರದೊಂದಿಗೆ ಉದ್ಯೋಗ ಮೇಳವು ನಡೆಯುತ್ತಿದ್ದು, ನೆಹರೂ ಮೆಮೋರಿಯಲ್ ಕಾಲೇಜಿನ ಆವರಣ ಸಾವಿರಾರು ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದೆ.

ಸುದ್ದಿ ಮಾಹಿತಿ ಕೇಂದ್ರದಿಂದ ಉದ್ಯೋಗ ಮೇಳದಲ್ಲಿ ಉಚಿತ ಉದ್ಯೋಗ ನೋಂದಣಿ

ಸುಳ್ಯದ ಸುದ್ದಿ ಮಾಹಿತಿ ಕೇಂದ್ರದ ಸ್ಟಾಲ್ ಕೂಡಾ ಉದ್ಯೋಗ ಮೇಳದಲ್ಲಿದ್ದು, ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿ ನೀಡುತ್ತಿದ್ದು, ಉಚಿತ ಉದ್ಯೋಗ ನೋಂದಣಿ ಮಾಡಿಕೊಡಲಾಗುತ್ತಿದೆ.

ಉದ್ಯೋಗ ಮೇಳದಲ್ಲಿ ಭಾಗವಹಿಸಿರುವ ವಿವಿಧ ಕಂಪೆನಿಗಳ ಮಾಹಿತಿ
ಉದ್ಯೋಗ ಮೇಳದಲ್ಲಿ ಎಸನ್ಸ್ಶರ್, ಇನ್ಫೋಸಿಸ್, ಪ್ರಸನ್ನ ಟೆಕ್ನಾಲಜೀಸ್, ಕೊಜೆಂಟ್, ಜಸ್ಟ್ ಡಯಲ್, ಎಕ್ಸಪರ್ಟ್ ಪಿ.ಯು. ಕಾಲೇಜು, ಕಾಂಚನ ಆಟೋಮೊಬೈಲ್, ಹರ್ಷ, ಮೆಟಸಾಪ್ಟ್, ಇಂಪ್ಲೆಸಿಸ್, ಮಂಗಳೂರು ಪುಡ್ & ಬೆವರೇಜ್, ಎಸ್.ಬಿ.ಐ. ಲೈಪ್, ಗ್ಲೋಟಚ್, ರಿಲಾಯನ್ಸ್ ನಿಫಾನ್, ಸುಜುಕಿ ಫೈಗ್ರೂಫ್, ಎ.ಜೆ. ಗ್ರಾಂಡ್, ಎಕ್ಸಿಸ್ ಬ್ಯಾಂಕ್, ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್, ನಿಯೋನ್ ಕನೆಕ್ಟ್, ಇಡೋಸ್ಪಿಯರ್ ಓವರ್ಸೀಸ್, ವಿನ್ ಮ್ಯಾನ್, ನೊರಾಕ್, ಅಸ್ಟ ಅಕಾಡೆಮಿ, ಕೊಟೆಕ್ ಲೈಫ್ ಇನ್ಶೂರೆನ್ಸ್, ತಿರುಮಲ ಹೋಂಡಾ, ಸಾಯ ಎಂಟರ್ ಪ್ರೈಸಸ್, ಹೆಚ್.ಡಿ.ಎಫ್.ಸಿ. ಬ್ಯಾಂಕ್, ಪ್ರತಿಭಾನ್ವಿತ ಇನ್ಫೋರ್ಸೋಸ್, ಕಝಾನ ಜುವೆಲ್ಲರಿ, ಲೈಫ್ ಸ್ಟೈಲ್, ಮೆಡ್ ಪ್ಲಸ್, ಮುತ್ತೂಟ್ ಪೈನಾನ್ಸ್, ಐಸಿ.ಐ.ಸಿ. ಬ್ಯಾಂಕ್, ಕೋಸ್ಟಲ್ ಫಾರ್ಮ್ಸ್, ರಿಲಯನ್ಸ್ ಜಿಯೋ, ವಿ.ಕೆ. ಫರ್ನಿಚರ್, ಪ್ರಕಾಶ್ ರಿಟೇಲ್ ಪ್ರೈವೇಟ್, ಅರವಿಂದ ಮೋಟಾರ್ಸ್, ಭಾರತ್ ಫೈನಾನ್ಸ್, ಜೆನೆಸಿಸ್, ಕರ್ನಾಟಕ ಏಜೆನ್ಸಿ, ಹಿಮತ್ ಸಿಂಕ, ಅಧ್ವಿಕಾ ಟೆಕ್ನಾಲಜಿ, ಹೆಚ್.ಸಿ.ಎಲ್. ಟೆಕ್ನಾಲಜಿ, ಬಜಾಜ್ ಅಲಿಯಾನ್ಸ್ ಲೈಫ್, ಕೆ.ಎಸ್.ಡಿ.ಸಿ., ಮಣಿಪಾಲ್ ಗ್ಲೋಬಲ್, ಯುನೈಟೆಡ್ ಟೊಯೋಟಾ, ಎಸ್.ಆರ್.ಕೆ. ಲ್ಯಾಡರ್ಸ್, ಭಾರತ್ ಅಟೋ ಕಾರ್ಸ್, ಶ್ರೀ ಸಾಯಿ ಎಂಟರ್ಪ್ರೈಸಸ್, ಹೋಂಡಾ, ಯು.ಟಿ‌.ಎಲ್. ಟೆಕ್ನಾಲಜಿ, ಎಸ್ ವೆಟೆಕ್, ಕನೆಕ್ಟ್, ವಿಧುಷ ದ ಲರ್ನಿಂಗ್ ಆ್ಯಪ್, ಎನ್.ಟಿ.ಟಿ.ಎಫ್., ಮಾಂಡೋವಿ ಮೋಟಾರ್ಸ್, ಆಭರಣ ಮೋಟಾರ್ಸ್, ಬಿ.ಎ.ಸಿ.ಸಿ., ಹೆಚ್.ಎಸ್.ಬಿ.ಸಿ., ಪ್ರೀಡಂ ಆ್ಯಪ್, ಐ.ಎಂ. ಸಿ.ಕೆ. ಕೆ.ಜಿ.ಟಿ.ಟಿ.ಟಿ., ಅಫಾನ ಇಂಟರ್ ನ್ಯಾಶನಲ್ , ಐ.ಐ.ಎ.ಎಸ್. ಕಾಲೇಜ್, ಗೋ ಕನೆಕ್ಟ್, ಗವರ್ನಮೆಂಟ್ ಟೂಲ್ಸ್ & ಟ್ರೈನಿಂಗ್ ಸೆಂಟರ್, ಜೂಮ್ ಟೆಕ್, ಕೆ.ವಿ.ಜಿ. ಮೆಡಿಕಲ್ ಕಾಲೇಜು ಸೇರಿದಂತೆ ಸುಮಾರು 73 ವಿವಿಧ ಕಂಪೆನಿಗಳು ಭಾಗವಹಿಸಿದ್ದು,ಉದ್ಯೋಗ ಮೇಳಕ್ಕೆ ಮೆರಗು ನೀಡಿದೆ.